CM Bommai: ಮತದಾನೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ- ಸಿಎಂ ಬೊಮ್ಮಾಯಿ
Karnataka Assembly Polls: ಮತದಾನದ ಬಳಿಕ ಮಾಧ್ಯಮದೊಂದಿಗೆ ಮಾತಾನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107 ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಗಿತ್ತು ಹಿಗಾಗಿ ಈ ಬಾರಿ ಚುನಾವಣೆ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ.
ಹುಬ್ಬಳ್ಳಿ: ಮತದಾನದ ಬಳಿಕ ಮಾಧ್ಯಮದೊಂದಿಗೆ ಮಾತಾನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107 ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಗಿತ್ತು ಹೀಗಾಗಿ ಈ ಬಾರಿ ಚುನಾವಣೆ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ.
ಇದನ್ನೂ ಓದಿ: Karnataka Elections : ಕ್ಯಾಂಪೇನ್ಗೆ ಹೋದಾಗ ತುಂಬ ಸತ್ಯಗಳು ಗೋಚರವಾದವು - ಕಿಚ್ಚ ಸುದೀಪ್
ಇನ್ನು ಫಲಿತಾಂಶದ ವರೆಗೂ ಕಾಯಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಚುನಾವಣಾ ಪ್ರಚಾರದಲ್ಲಿ ಗೆಲ್ಲುವ ನಂಬಿಕೆ ಹೊಂದಿದ್ದವು ಎಲ್ಲ ಬೆಳವಣಿಗೆಗಳ ಬಗ್ಗೆ ಈಗಲೂ ಅದೇ ನಂಬಿಕೆಯಿದ್ದು ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರೃಣಿ ಎಂದ ಅವರು ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು ಇದು ಒಳ್ಳೆಯ ಬೆಳವಣೆಯಾಗಿದೆ. ನನ್ನ ವಿರುದ್ಧ ಷಡ್ಯಂತರ, ಅಪ್ರಚಾರ ಮಾಡಿದರು ಆದರೆ ನಿನ್ನೆಗೆ ಮುಗಿದಿವೆ ಇಂದು ಯಾವುದೇ ಆ ವಾತಾವರಣ ಇಲ್ಲ.
ಇದನ್ನೂ ಓದಿ: Karnataka Assembly Elections: ಮತಚಲಾಯಿಸಿ ಸೆಲ್ಫಿಗೆ ಫೋಸ್ ನೀಡಿದ ಸ್ಯಾಂಡಲ್ ವುಡ್ ತಾರೆಯರು...
ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೆನೆ ಯಾವುದೇ ಅನುಮಾನ ಬೇಡಾ ಎಂದು ತಮ್ಮ ಅಭ್ಯರ್ಥಿಗಳಿಗೆ ಕಾರ್ಯರ್ತರಿಗೆ ಧೈರ್ಯ ಹೇಳಿದ್ದಾರೆ. ಆ ವೇಳೆ ಪ್ರಧಾನ ಮಂತ್ರಿ ಬಗ್ಗೆ ಮಾತನಾಡಿದ ಅವರು, ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ ಎಂದು ಪ್ರಧಾನ ಮಂತ್ರಿ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದ್ದಾರೆ.
ಇನ್ನುಳಿದಂತೆಯೇ ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ನನಗೆ ವಿಶ್ವಾಸವಿದೆ ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆವೆ ಎಂದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ