ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಬಂದುಹೋದ ನಂತರವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಭವವಿದೆ. ಸಂಪುಟ ವಿಸ್ತರಣೆಯಾಗಿ ಇಂದಿಗೆ ಮೂರು ದಿನ ಕಳೆಯುತ್ತಾ ಬಂದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಈವರೆಗೂ ಸಚಿವರ ಖಾತೆಗಳ ಹಂಚಿಕೆಗೆ ಕೈ ಹಾಕಿಲ್ಲ. ನಾಳೆ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ಕೊಡಲಿದ್ದು, ಭಾನುವಾರ ಸಂಜೆ ನವದೆಹಲಿಗೆ ತೆರಳುವರು. ನಂತರವೇ ಸಚಿವರ ಖಾತೆ ಕ್ಯಾತೆ ಇತ್ಯರ್ಥವಾಗುವ ಸಂಭವವಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ಹಲವು ಬಿಜೆಪಿ(BJP) ಮುಖಂಡರು ಬ್ಯುಸಿಯಾಗಿದ್ದಾರೆ. ಜೊತೆಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಪರಿಸ್ಥಿತಿ ಸುಧಾರಿಸುವವರೆಗೂ ಸಿಎಂ ಕಾಯುವ ತಂತ್ರಕ್ಕೆ ಶರಣಾಗಿದ್ದಾರೆ.


College Reopen : ಇಂದಿನಿಂದ ಪದವಿ, ಸ್ನಾತಕೋತ್ತರ ತರಗತಿಗಳು ಆರಂಭ


ಸಿಎಂ ತಮ್ಮ ಬಳಿ ಇರಿಸಿಕೊಂಡಿರುವ ಇಂಧನ ಮತ್ತು ಬೆಂಗಳೂರು ನಗರಾಭಿವೃಧ್ಧಿ ಖಾತೆಗಳ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ಚರ್ಚೆಯಿಲ್ಲದೆ ಇವುಗಳನ್ನು ನೀಡಲು ಸಾಧ್ಯವಿಲ್ಲ. ಇದು ಮತ್ತಷ್ಟು ಅಸಮಾಧಾನ ಹೆಚ್ಚಿಸಿದೆ. ಉಮೇಶ್ ಕತ್ತಿ ಅವರಿಗೆ ಇಂಧನ, ಎಂಟಿಬಿ ನಾಗರಾಜ್‍ಗೆ ವಸತಿ ಖಾತೆ, ಅರವಿಂದ ಲಿಂಬಾವಳಿಗೆ ಬೆಂಗಳೂರು ನಗರಾಭಿವೃದ್ಧಿ, ಅಂಗಾರಗೆ ಕನ್ನಡ ಮತ್ತು ಸಂಸ್ಕೃತಿ, ಯೋಗೇಶ್ವರ್‍ಗೆ ಯುವಜನ ಮತ್ತು ಕ್ರೀಡಾ ಖಾತೆ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


JDS: ಮಹತ್ವದ ಬದಲಾವಣೆಯತ್ತ ಜೆಡಿಎಸ್: ಹೊಸ ಕೋರ್ ಕಮಿಟಿ ರಚನೆಗೆ 'ಜೆಡಿಎಸ್' ನಿರ್ಧಾರ!


ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ್ ಅವರಿಗೆ ವಸತಿ ಖಾತೆ ನೀಡಲಾಗಿತ್ತು, ಹೀಗಾಗಿ ಅದೇ ಖಾತೆ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ ಕೂಡ ಅದೇ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.


D.K.Shivakumar: 'ಏಳು ಜನ್ಮ ಎತ್ತಿದರೂ ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗುವುದಿಲ್ಲ’


ಸದ್ಯ ಕೈಗರಿಕಾ ಖಾತೆ ಜಗದೀಶ್ ಶೆಟ್ಟರ್ ಅವರ ಬಳಿಯಿದೆ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದ ಅರವಿಂದ ಲಿಂಬಾವಳಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಖಾತೆ ಹಂಚಿಕೆ ವಿಷಯ ಸಿಎಂ ಯಡಿಯೂರಪ್ಪ ಅವರಿಗೆ ಸವಾಲಿನ ಕೆಲಸವಾಗಿದೆ, ಆರ್ .ಶಂಕರ್ ಅವರಿಗೆ ಒಳ್ಳೆಯ ಖಾತ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು.


Ramesh Jarkiholi: ಸಿಪಿ ಯೋಗೀಶ್ವರ್ ಪರ ಬೆಳಗಾವಿ ಸಾಹುಕಾರ್ ಬ್ಯಾಟಿಂಗ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ