ಬೆಂಗಳೂರು: COVID-19 ಪಾಸಿಟಿವ್ ಬಂದು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ   ಬಿ.ಎಸ್. ಯಡಿಯೂರಪ್ಪ (BS Yediyurappa)  ಆಸ್ಪತ್ರೆಯಲ್ಲಿ ಇಂದು ಅಯೋಧ್ಯೆಯಲ್ಲಿ ಇಂದು ನಡೆಯುತ್ತಿರುವ ಶ್ರೀರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಬೆಳಿಗ್ಗೆ ಉಪಹಾರ ಮತ್ತು ಆರೋಗ್ಯ ತಪಾಸಣೆಯ ಬಳಿಕ ಟೆಲಿವಿಷನ್ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ವಿಧಿ ವಿಧಾನಗಳನ್ನು  ವೀಕ್ಷಣೆ ಮಾಡುತ್ತಿದ್ದಾರೆ.


ಹೆಲ್ತ್ ಬುಲೆಟಿನ್ ರಿಲೀಸ್: ಯಡಿಯೂರಪ್ಪ ಓಕೆ, ಸಿದ್ದರಾಮಯ್ಯಗೆ ಸ್ವಲ್ಪ ಸಮಸ್ಯೆ


ಮಣಿಪಾಲ್ ಆಸ್ಪತ್ರೆಯ ತಾವಿರುವ ವಾರ್ಡಿನಲ್ಲೇ ಟಿವಿ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಂದಲೇ ಶ್ರೀರಾಮ ಜನ್ಮಭೂಮಿಯ ಪೂಜಾವಿಧಾನಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.


ಇದಕ್ಕೂ ಮೊದಲು ಸರಣಿ ಟ್ವೀಟ್ ಮೂಲಕ  ರಾಮ ಮಂದಿರ (Ram Mandir)  ಶಿಲಾನ್ಯಾಸ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ ಶತಮಾನಗಳ ನಂತರ ಮತ್ತೆ ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನನ್ವಯ ಭಾರತೀಯರ ಪರಮ ಪವಿತ್ರ ಶ್ರದ್ಧಾಕೇಂದ್ರ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಲಿದ್ದು, ಇಂದು ಪ್ರಧಾನಮಂತ್ರಿ ಶ್ರೀ @narendramodi ರವರು ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಬರೆದಿದ್ದಾರೆ.


ಮತ್ತೊಂದು ಟ್ವೀಟ್ ನಲ್ಲಿ ಅಗಣಿತ ಸಾಧು-ಸಂತರ, ಶ್ರದ್ಧಾಳುಗಳ ತಪಸ್ಸು, ಪರಿಶ್ರಮ, ಬಲಿದಾನ, ಪ್ರಾರ್ಥನೆಗಳು ಸಾಕಾರಗೊಳ್ಳುವ ಸಮಯ ಬಂದಿದೆ. ಜನಾಂದೋಲನಗಳಲ್ಲಿ ಪಾಲ್ಗೊಂಡು, ಅನೇಕ ರೀತಿಯ ಸವಾಲುಗಳನ್ನು ಎದುರಿಸಿ, ಹೋರಾಟಗಳನ್ನು ಮಾಡಿದ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಪ್ರಯತ್ನಗಳನ್ನು ಸ್ಮರಿಸುತ್ತಾ, ಈ ಹೆಮ್ಮೆಯ ಐತಿಹಾಸಿಕ ಕ್ಷಣವನ್ನು ಸ್ವಾಗತಿಸೋಣ ಎಂದಿದ್ದಾರೆ.


ಕೋವಿಡ್ -19 (Covid 19)   ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಆಸ್ಪತ್ರೆಯಲ್ಲಿ COVID-19 ಪಾಸಿಟಿವ್ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸ್ವಲ್ಪ ಜ್ವರ ಇದ್ದು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.