ರಾಮನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅನುಕೂಲವಾಗುವಂತಹ ಸುಮಾರು 540 ಕೋಟಿ ರೂ. ವೆಚ್ಚದ ಯೋಜನೆಗೆ ಇಂದು ಕಣ್ವಾ ಜಲಾಶಯ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.


COMMERCIAL BREAK
SCROLL TO CONTINUE READING

ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ತಾಲ್ಲೂಕಿನ ಎಲ್ಲಾ ಹಳ್ಳಿ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸತ್ತೇಗಾಲ ಸಮೀಪದಲ್ಲಿ ಕಾವೇರಿ ನದಿಯಿಂದ ಇಗ್ಗಲೂರು ಹೆಚ್.ಡಿ. ದೇವೇಗೌಡ ಬ್ಯಾರೆಜ್ ಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ.


ಕಾವೇರಿ ನದಿಯಿಂದ 210 ಕ್ಯೂಸೆಕ್  ನೀರನ್ನು  ಈ ಮಹಾತ್ವಾಂಕ್ಷಿ ಯೋಜನೆಯಡಿ ಪೈಪುಗಳ ಮೂಲಕ ಇಗ್ಗಲೂರು, ಕಣ್ವಾ, ವೈಜಿ ಗುಡ್ಡ, ಮಂಚನಬೆಲೆ  ಜಲಾಶಯಗಳಿಗೆ ತುಂಬಿಸಲಾಗುವುದು.


ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಶ್ರೀ ಸಾ.ರ.ಮಹೇಶ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.