ಬೀದರ್: ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೀದರ್ ಜಿಲ್ಲೆಯ ರೈತ ಕಾಶಿಲಿಂಗ ಅಗ್ರಹಾರ ಅವರ ಹೊಲಕ್ಕೆ ಭೇಟಿ ನೀಡಿದರು. 


COMMERCIAL BREAK
SCROLL TO CONTINUE READING

ಕಾಶಿಲಿಂಗ ಅವರು ತಮ್ಮ ಸ್ವಂತ 6 ಎಕರೆ ಮತ್ತು ಇನ್ನುಳಿದ 4 ಎಕರೆ ಹೊಲದಲ್ಲಿ ಕೃಷಿಯಲ್ಲಿ ನಡೆಸಿದ ಹೊಸ ಪ್ರಯೋಗಗಳನ್ನು ಸಿಎಂ ಅವರು ಖುದ್ದು ವೀಕ್ಷಿಸಿದರು‌. ತಮ್ಮ ಪಕ್ಕಕ್ಕೆ ರೈತ ಕಾಶಿಲಿಂಗ ಅವರನ್ನು ಕರೆದು ಹಲವಾರು ಮಾಹಿತಿ ಪಡೆದ ಸಿಎಂ ಇದೆ ವೇಳೆ ಕೃಷಿ ಹೊಂಡ, ಪಾಲಿಹೌಸ್ ವೀಕ್ಷಿಸಿದರು. 



ಕಬ್ಬು‌ ತಿಂದು, ಸಸಿ ನೆಟ್ಟ ಮುಖ್ಯಮಂತ್ರಿ:
12 ತಿಂಗಳಿನ ಕಬ್ಬಿನ ಬೆಳೆ, ಅದರ ವಿಶೇಷತೆ ಕುರಿತು ಸಚಿವರಾದ ಬಂಡೆಪ್ಪ ಖಾಶೆಂಪೂರ ಸಿಎಂ ಅವರಿಗೆ ವಿವರಿಸಿದರು. ಈ ವೇಳೆ ಸಚಿವರಾದ ಬಂಡೆಪ್ಪ ಅವರು ಕಬ್ಬಿನ ಗಳವೊಂದನ್ನು ಮುರಿದು ತಿಂದು ಗಮನ ಸೆಳೆದರು.‌ ಬಳಿಕ ಮುಖ್ಯಮಂತ್ರಿ ಅವರು ಅವರು ಕೂಡ ಕಬ್ಬು ತಿಂದರು.


ಹೈದರಾಬಾದನ ವಿಶ್ವಾನಂದ ರಾಜ ಅವರು ಸಸಿ ನೆಡುವ‌ ಇಜಿ ಪ್ಲಾಂಟರ್ ಕೃಷಿ ಸಾಧನದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದರು. ಬಳಿಕ ಸಿಎಂ ಆ ಸಾಧನದ ಮೂಲಕ ಹೊಲದಲ್ಲಿ ಸಸಿ‌ ನೆಟ್ಟರು.



ತೋಟಗಾರಿಕಾ ಯೋಜನೆಯ ಮಾಹಿತಿ: 
ಸಮಗ್ರ ತೋಟಗಾರಿಕಾ ಯೋಜನೆ ಅಳವಡಿಕೆಯನ್ನು ರೈತ ಕಾಶಿಲಿಂಗ ಅವರು ಅಳವಡಿಸಿಕೊಂಡ ಬಗ್ಗೆ ಸಿಎಂ ಅವರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಭಾವು ವಿವರಿಸಿದರು. 


ಈ ಸಂದರ್ಭದಲ್ಲಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ಇದ್ದರು.