ಬೆಂಗಳೂರು: ಪತ್ರಿಕಾ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶುಭಾಶಯ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಮಾಜ ಹಾಗೂ ಸರ್ಕಾರದ ನಡುವೆ ಇರುವ ಮಹತ್ವದ ಕೊಂಡಿ ಪತ್ರಿಕೆಗಳು. ಸಮಾಜದ ಏಳಿಗೆಗಾಗಿ ಸದಾ ಶ್ರಮಿಸುವ ಪತ್ರಿಕೆಗಳು ನಾಡಿನ ಒಳಿತಿಗೆ ಇರುವ ಬೆಳಕು. ಅಂತಹ ಬೆಳಕನ್ನು ಕೊಟ್ಟ ಎಲ್ಲಾ ಪತ್ರಕರ್ತ ಬಂಧುಗಳಿಗೆ ಪತ್ರಿಕಾದಿನಾಚರಣೆಯ ಶುಭಾಶಯಗಳು" ಎಂದು ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಜುಲೈ 1 ಅನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಕ್ರಿ.ಶ.1843ರಲ್ಲಿ ರೆವರೆಂಡ್ ಫಾದರ್ ಹರ್ಮನ್ ಮೊಗ್ಲಿಂಗ್ ಅವರ ಸಂಪಾದಕತ್ವದಲ್ಲಿ ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಆರಂಭವಾಯಿತು. ಆ ದಿನ ಕನ್ನಡ ಪತ್ರಿಕೋದ್ಯಮದ ಉಗಮಕ್ಕೆ ಕಾರಣವಾಯಿತು. ಹಾಗಾಗಿ ಜುಲೈ 1ನ್ನು ಪ್ರತಿ ವರ್ಷ ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.