ಏರ್ ಶೋಗಾಗಿ ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ಪತ್ರ
2017 ಫೆಬ್ರವರಿ ರಲ್ಲಿ ನಡೆದ ಏರೋ ಶೋಗೆ 51 ದೇಶಗಳಿಂದ 549 ಗ್ಲೋಬಲ್ ಹಾಗೂ ದೇಶದ ಕಂಪನಿಗಳು ಭಾಗವಹಿಸಿದ್ದವು.
ಬೆಂಗಳೂರು: ಪ್ರತಿಷ್ಠಿತ ಏರ್ ಶೋ(ಏರೋ ಇಂಡಿಯಾ 2019) ಅನ್ನು ಬೆಂಗಳೂರಿನಲ್ಲೇ ನಡೆಸುವಂತೆ ಕೋರಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಏರ್ ಶೋ ಸ್ಥಳಾಂತರ, ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ ಉತ್ತರಪ್ರದೇಶ
ಪ್ರತಿಷ್ಠಿತ ಏರ್ ಶೋ ಹಾಗೂ ರಕ್ಷಣಾ ವಸ್ತುಪ್ರದರ್ಶನ ಕೈಗಾರಿಕೆ ಹಾಗೂ ಸಾಮಾನ್ಯ ಜನರನ್ನು ಆಕರ್ಷಿಸ್ತಾ ಇತ್ತು. 2017 ಫೆಬ್ರವರಿ ರಲ್ಲಿ ನಡೆದ ಏರೋ ಶೋಗೆ 51 ದೇಶಗಳಿಂದ 549 ಗ್ಲೋಬಲ್ ಹಾಗೂ ದೇಶದ ಕಂಪನಿಗಳು ಭಾಗವಹಿಸಿದ್ದವು ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಿಎಂ, ಬೆಂಗಳೂರು ರಕ್ಷಣೆ ಹಾಗೂ ವಾಯುಯಾನ ಕೇಂದ್ರವಾಗಿದೆ. ಹಾಗಾಗೀ ಏರೋ ಶೋ ಮಾಡಲು ಬೆಂಗಳೂರು ಸೂಕ್ತ ಜಾಗ. ನಮ್ಮ ರಾಜ್ಯ ರಸ್ತೆ, ಸಾರಿಗೆ ವ್ಯವಸ್ಥೆ ಹಾಗೂ ಟ್ರಾಫಿಕ್ ಸಮಸ್ಯೆಯನ್ನು ಅಭಿವೃದ್ದಿಗೊಳಿಸಿದೆ. ರಕ್ಷಣಾ ಮತ್ತು ವೈಮಾನಿಕ ವಲಯದ ಬಹಳಷ್ಟು ಉದ್ದಿಮೆಗಳು ರಾಜ್ಯದಲ್ಲಿದ್ದು, ಈ ದೃಷ್ಟಿಯಿಂದ ಏರ್‌ಶೋ ನಡೆಸಲು ಬೆಂಗಳೂರು ಸೂಕ್ತ ಆಯ್ಕೆ ಎಂದು ಸಿಎಂ ತಿಳಿಸಿದ್ದಾರೆ.
ಇಷ್ಟು ವರ್ಷ ಬೆಂಗಳೂರಿನಲ್ಲಿ ನಡೆದ ಏರೋ ಶೋ ಬಹಳ ಸುಂದರವಾಗಿ, ಯಶಸ್ವಿಯಾಗಿ ನದೆದಿದೆ. ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಾದ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಪತ್ರದಲ್ಲಿ ಬರೆದಿದ್ದಾರೆ.