ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕೆಂದು ವಿನಂತಿಸಿಕೊಂಡರು.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿಯವರ ಭೇಟಿಯ ಬಳಿಕ ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು" ನೀತಿ ಆಯೋಗದ ಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದೇನೆ ಅಲ್ಲದೆ ಕೇಂದ್ರ ಸಚಿವರು ಮತ್ತು ಪ್ರಧಾನಿಗಳನ್ನು  ಭೇಟಿ ಮಾಡಿ  ಪ್ರಕೃತಿ ವಿಕೋಪದ ಪರಿಹಾರವನ್ನು ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದೇನೆ" ಎಂದು ತಿಳಿಸಿದರು 


ಕೇಂದ್ರ ಸರ್ಕಾರವು ಮಹಾರಾಷ್ಟ್ರ, ಗುಜರಾತ್ ,ಮಧ್ಯಪ್ರದೇಶ ರಾಜ್ಯಗಳಿಗೆ ನೀಡಿದ ನೆರವಿನಂತೆ ರಾಜ್ಯಕ್ಕೂ ಕೂಡ ನೀಡಬೇಕಂದು ಆಗ್ರಹಿಸಿದ್ದಾರೆ. 


"ಅಲ್ಲದೆ ಸಾರಿಗೆ ಸಚಿವ ಗಡ್ಕರಿಯವರನ್ನು ಭೇಟಿ ಮಾಡಿ ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದ್ದೇನೆ .ಹಾಸನ - ನೆಲಮಂಗಲ , ತುಮಕೂರು ಶಿವಮೊಗ್ಗ ,ಬೆಳಗಾವಿ ಹೊರವರ್ತುಲ ರಸ್ತೆ ,ಸಾಗರ ಸಿಗಂದೂರು ರಸ್ತೆಗಳ ಕಾಮಗಾರಿಯನ್ನು ತ್ವರೀತಗೊಳಿಸುವಂತೆ ಮನವಿ ಮಾಡಿರುವುದಾಗಿ" ಮುಖ್ಯಮಂತ್ರಿ ತಿಳಿಸಿದರು.


ಕಾವೇರಿ ವಿಚಾರವಾಗಿ ಪ್ರಾಧೀಕಾರದ ಅಧಿಸೂಚನೆಯಲ್ಲಿ ಕೆಲವು ಅಂಶಗಳು ಅವೈಜ್ಞಾನಿಕವಾಗಿವೆ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಜಾರಿಗೆ ತರುವುದು ಅನಿವಾರ್ಯ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಇದರಲ್ಲಿ ಕೆಲವು ಮಾರ್ಪಾಡು ಮಾಡಬೇಕೆಂದು ಪ್ರಧಾನಿಗೆ ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಮಾಧ್ಯಮದವರಿಗೆ ತಿಳಿಸಿದರು.