ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳ ಬಳಿಕ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಮುಖ್ಯಮಂತ್ರಿ ಹೊರತುಪಡಿಸಿ 26 ಸಚಿವರು ಮಾತ್ರ ಇರುವುದರಿಂದ ಜಿ. ಪರಮೇಶ್ವರ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಈ ನಾಲ್ವರು ಸಚಿವರಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದು, ಜೆಡಿಎಸ್ 9 ಜಿಲ್ಲೆ ಮತ್ತು ಕಾಂಗ್ರೆಸ್ 20 ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೊಂಡಿವೆ.


ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:


  • ಡಾ. ಜಿ ಪರಮೇಶ್ವರ್‌ : ಬೆಂಗಳೂರು ನಗರ ಮತ್ತು ತುಮಕೂರು.

  • ಆರ್‌. ವಿ ದೇಶಪಾಂಡೆ : ಉತ್ತರ ಕನ್ನಡ ಮತ್ತು ಧಾರವಾಡ

  • ಡಿ.ಕೆ ಶಿವಕುಮಾರ್‌ : ರಾಮನಗರ ಮತ್ತು ಬಳ್ಳಾರಿ

  • ಕೆ.ಜೆ ಜಾರ್ಜ್ : ಚಿಕ್ಕಮಗಳೂರು

  • ರಮೇಶ್‌ ಜಾರಕೀಹೊಳಿ :  ಬೆಳಗಾವಿ

  • ಶಿವಾನಂದ ಪಾಟೀಲ್ : ಬಾಗಲಕೋಟೆ

  • ಪ್ರಿಯಾಂಕ್‌ ಖರ್ಗೆ : ಕಲಬುರಗಿ

  • ರಾಜಶೇಖರ ಬಿ. ಪಾಟೀಲ್ : ಯಾದಗಿರಿ

  • ವೆಂಕಟರಮಣಪ್ಪ : ಚಿತ್ರದುರ್ಗ

  • ಎನ್.ಎಚ್‌ ಶಿವಶಂಕರರೆಡ್ಡಿ : ಚಿಕ್ಕಬಳ್ಳಾಪುರ

  • ಕೃಷ್ಣೇಭೈರೇಗೌಡ : ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ

  • ಯು.ಟಿ ಖಾದರ್‌ : ದಕ್ಷಿಣ ಕನ್ನಡ

  • ಸಿ. ಪುಟ್ಟರಂಗಶೆಟ್ಟಿ  : ಚಾಮರಾಜನಗರ

  • ಜಮೀರ್‌ ಅಹ್ಮದ್‌ : ಹಾವೇರಿ

  • ಜಯಮಾಲ : ಉಡುಪಿ

  • ಆರ್‌. ಶಂಕರ್‌ : ಕೊಪ್ಪಳ

  • ಎನ್‌. ಮಹೇಶ್‌ : ಗದಗ

  • ವೆಂಕಟರಾವ್‌ ನಾಡಗೌಡ : ರಾಯಚೂರು

  • ವಾಸು ಶ್ರೀನಿವಾಸ್‌ : ದಾವಣಗೆರೆ

  • ಸಿ.ಎಸ್‌. ಪುಟ್ಟರಾಜು : ಮಂಡ್ಯ

  • ಸಾ.ರಾ. ಮಹೇಶ್ : ಕೊಡಗು

  • ಬಂಡೆಪ್ಪ ಕಾಶೆಂಪುರ್ : ಬೀದರ್‌

  • ಎಚ್‌.ಡಿ. ರೇವಣ್ಣ : ಹಾಸನ

  • ಡಿ.ಸಿ. ತಮ್ಮಣ್ಣ : ಶಿವಮೊಗ್ಗ

  • ಎಂ.ಸಿ. ಮನಗೂಳಿ : ವಿಜಯಪುರ

  • ಜಿ.ಟಿ. ದೇವೇಗೌಡ : ಮೈಸೂರು