CM Siddaramaiah: ಶಿಷ್ಯನ‌ ಸೋಲಿಸಲು ಚಿಕ್ಕಬಳ್ಳಾಪುರಕ್ಕೆ ಬಂದ ಸಿಎಂ‌ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿ.. ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ. 


COMMERCIAL BREAK
SCROLL TO CONTINUE READING

ಚಿಕ್ಕಬಳ್ಳಾಪುರದ ಲೋಕಸಭಾ ಚುನಾವಣಾ (Loksabha Election) ರಂಗೇರಿದ್ದು ಇಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಮತಯಾಚನೆ ಮಾಡಲು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ ಸಿಎಂ‌ ಸಿದ್ದರಾಮಯ್ಯ (CM Siddaramaiah) ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್ ನಿಂದ ಶಿಡ್ಲಘಟ್ಟ ವೃತ್ತದ ವರೆಗೂ ಭರ್ಜರಿ ರೊಡ್ ಶೋ ನಡೆಸಿ ನಂತರ ಮಾತನಾಡಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ (Congress Candidate Raksha Ramaiah) ಪರ ಭರ್ಜರಿ ಪ್ರಚಾರ ಮಾಡಿದ ಸಿಎಂ ಸಿದ್ದರಾಮಯ್ಯ, ರಕ್ಷಾರಾಮಯ್ಯ ಅವರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತೃದ ಜನತೆ ಆಶೀರ್ವಾದ ಮಾಡಬೇಕು, ಈ‌ ತಿಂಗಳು 26 ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಸೇರಿಕೊಂಡು ಒಬ್ಬ ಅಭ್ಯರ್ಥಿ ಮೇಲೆ‌ ನಿಲ್ಲಿಸಿದ್ದಾರೆ. ಎನ್‌ಡಿ‌ಎ ಅಭ್ಯರ್ಥಿ (NDA Candidate) ವಿಧಾನಸಭಾ ಚುನಾವಣೆಯಲ್ಲಿ ಅವನೊಬ್ಬ ಭ್ರಷ್ಟ ಮಂತ್ರಿಯಾಗಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ವಿಧಾನ‌ಸಭೆ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳೆಹಿಸಿದ್ದೀರಿ ಈಗ ಮತ್ತೆ ಪ್ರಭಾವ ಬಳಸಿ ಲೋಕಸಭೆ ಸ್ಪರ್ಧೆ ಮಾಡಿದ್ದಾರೆ. ನೀವೆಲ್ಲಾ ತೀರ್ಮಾನ ಮಾಡಬೇಕಾಗಿದೆ. ಒಮ್ಮೆ ತಿರಸ್ಕಾರ ಮಾಡಿದ ಭ್ರಷ್ಟನನ್ನು ಲೋಕಸಭೆ ಕಳುಹಿಸಿಬೇಕಾ ಎಂದು ಯೋಚಿಸಬೇಕಾಗಿದೆ. ಮಂತ್ರಿಯಾಗಿದ್ದ ವೇಳೆ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಒಂದು ನ್ಯಾಯಾಂಗ ಆಯೋಗ ರಚನೆಯಾಗಿದೆ ಅದು‌ ತನಿಖೆ ನಡೆಯುತ್ತಿದೆ. ನನಗೆ ಇದ್ದ ಮಾಹಿತಿ ಪ್ರಕಾರ ಎನ್‌ಡಿ‌ಎ ಅಭ್ಯರ್ಥಿ ಮಂತ್ರಿ ವಿರುದ್ದ ಸಾಕಷ್ಟು ಸಾಕ್ಷ್ಯದಾರಗಳಿವೆ ತನಿಖೆ ಪೂರ್ಣ ಆದ ಮೇಲೆ ತಪ್ಪಿತಸ್ಥರು ಎಂದು ಸಾಭೀತಾಗುತ್ತೆ. 100 ಕ್ಕೆ ನೂರು ಜೈಲಿಗೆ ಹೋಗಲಿದ್ದಾರೆ ಆದರಿಂದ ಈ‌ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಮತ್ತೊಮ್ಮೆ ಸೋಲಿಸಿ ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ- ಬಿಜೆಪಿ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ,ದಬ್ಬಾಳಿಕೆ:ಡಿ.ಕೆ.ಸುರೇಶ್ ಆಕ್ರೋಶ


ಜನತಾ ನ್ಯಾಯಾಲಯ ಕೊಡುವ ಶಿಕ್ಷೆ ಕಾನೂನಿಗಿಂತ ಕೊಡುವ ದೊಡ್ಡ ಶಿಕ್ಷಯಾಗಿದೆ. ನೀವು ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸಿ ರಕ್ಷಾರಾಮಯ್ಯ ಅವರನ್ನು‌ ಗೆಲ್ಲಿಸಿದರೆ ಅದೇ ಅವರಿಗೆ ದೊಡ್ಡ ಶಿಕ್ಷೆಯಾಗುತ್ತೆ. ಎನ್‌ಡಿಎ ಭ್ರಷ್ಟರು ಲೋಕಸಭೆ ಹೋದ್ರೆ ಇನ್ನೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತೆ. ಆದರಿಂದ 26 ರಂದು ನೀವು ಕೊಡುವ ತೀರ್ಪು ಮಹತ್ವದ್ದು. ನಿಮ್ಮ ಉತ್ಸಾಹ ನೋಡಿದರೆ ನೂರಕ್ಕೆ ನೂರು ರಕ್ಷಾರಾಮಯ್ಯ ಗೆಲ್ಲುತ್ತಾರೆ. ರಕ್ಷಾರಾಮಯ್ಯ ಅವರನ್ನು ನೀವೆಲ್ಲಾ ಗೆಲ್ಲಿಸುತ್ತೀರಾ ಎಂದು ನಂಬಿಕೆ‌ ಇದೆ. ಸುಧಾಕರ್ ಸೋತರೆ ಮಾತ್ರ ಈ ಕ್ಷೇತ್ರ ಉಳಿಯುತ್ತೆ ಎಂದರು.


ಇದನ್ನೂ ಓದಿ- ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಬರುತ್ತಿದ್ದಾರೆ: ಸಿಎಂ ಆಕ್ರೋಶ


ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ, ಸಚಿವರಾದ ಎಂಸಿ‌ ಸುಧಾಕರ್, ಕೃಷ್ಣಬೈರೇಗೌಡ, ಶಾಸಕ ಪ್ರದೀಪ್ ಈಶ್ವರ್, ನಾಜೀರ್ ಅಹಮದ್, ಎಂ.ಅರ್ ಸೀತಾರಾಂ, ಮಾಜಿ ಶಾಸಕರುಗಳಾದ ಬಚ್ಚೇಗೌಡ, ಮುನಿಯಪ್ಪ, ಅನುಸೂಯಮ್ಮ, ಸಂಪಂಗಿ ಇನ್ನಿತರ ಪ್ರಮುಖ ಮುಖಂಡರು ಇದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.