ಬೆಂಗಳೂರು : ವಿಧಾನಸೌಧ ಆವರಣದಲ್ಲಿ "ಶಕ್ತಿ"ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಸಚಿವರು ಯೋಜನೆಯ ಲೋಗೋ,ಮಾದರಿ  ಸ್ಮಾರ್ಟ್ ಕಾರ್ಡ್ ಬಿಡುಗಡೆ ಮಾಡಿದ ನಂತರ ಐದು ಮಹಿಳೆಯರಿಗೆ ಮಾದರಿ ಸ್ಟಿಕರ್ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಮತ್ತೆ ನಾನು ಚುನಾವಣೆಗೆ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ


ಕಾರ್ಯಕ್ರಮದಲ್ಲಿ ಮಾತಾನ್ನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಕಾರ್ಯಕ್ರಮ ಕೇವಲ ಬೆಂಗಳೂರಿನಲ್ಲಿ ಮಾತ್ರ ಅಲ್ಲ ನಾಡಿನ ಎಲ್ಲಾ ಜೊಲ್ಲೆಯಲ್ಲೂ ಶಕ್ತಿ ಯೋಜನೆಗೆ ಚಾಲನೆ ಸಿಗುತ್ತಿದೆ. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌದ ಕಟ್ಟುವ ಸಂದರ್ಭದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆದಿದ್ದಾರೆ. ನಾವು ಜನ ಸೇವೆ ಜನಾರ್ಧನ ಸೇವೆ ಎಂದು ಕೆಲಸ ಮಾಡುತ್ತೇವೆ. ಐದು ಗ್ಯಾರೆಂಟಿ ಘೋಷಣೆ ಮಾಡಿದ್ವಿ, ಶಕ್ತಿ ಕೊನೆಯ ಗ್ಯಾರೆಂಟಿ ಯೋಜನೆ. ಹೆಣ್ಣು ಕುಟುಂಬದ ಕಣ್ಣು. ವೆಂಕಟೇಶ ದೇವರನ್ನ ಲಕ್ಷ್ಮಿ ವೆಂಕಟೇಶ್ವರ, ಪಾರ್ವತಿ ಪರಮೇಶ್ವರ ಎನ್ನುತ್ತೇವೆ, ಇದು ನಮ್ಮ ಭಾರತದ ಸಂಸ್ಕೃತಿ. ಹೆಣ್ಣು ಮುಂದೆ ಇರಬೇಕು,ಎಂದು ಹೇಳಿದರು.


ಇನ್ನು ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡಿದರು, ಇದಕ್ಕೆ ಉತ್ತರ ಕೊಡುವ ಸಾಮರ್ಥ್ಯ ಇಲ್ಲ. ಕೆಲಸ ಮಾತ್ರ ಉಳಿಯುತ್ತೆ. ರಾಜ್ಯದ ಜನ ನಮ್ಮ ಕೈ ಹಿಡಿದರು, ಈ ಋಣ ಯಾವ ರೀತಿ ತೀರಿಸಬೇಕು ಎಂದು ತಿಳಿಯುತ್ತಿಲ್ಲ. ಸಚಿವ ರಾಮಲಿಂಗ ರೆಡ್ಡಿ ಈ ಇಲಾಖೆಯ ಅನುಭವ ಹೊಂದಿದ್ದಾರೆ ನಿಭಾಯಿಸುತ್ತಾರೆ. ಇನ್ನು ಸ್ಮಾರ್ಟ್ ಕಾರ್ಡ್ ಯಾಕೆ ಬೇಕು ಎಂಬ ಪ್ರಶ್ನೆ ಬರಬಹುದು? ಲೆಕ್ಕ ಬೇಕು ಎಂಬ ಕಾರಣಕ್ಕೆ ಇದು ಅಗತ್ಯ. ಬಿಜೆಪಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪಡೆದ ಬಾಡಿಗೆ ಬಸ್ ಗಳ ಬಾಡಿಗೆ ಕಟ್ಟಿಲ್ಲ. ಹೀಗೆ ಮಾಡಬಾರದು ಸಂಸ್ಥೆ ಉಳಿಯಬೇಕು, ಎಂದರು.


ಇದನ್ನೂ ಓದಿ: ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್‌ ಹಾಗೂ ಅಕಾಡಿಮಿಕ್‌ ಕೌನ್ಸಿಲ್‌ ಸದಸ್ಯರ ನೇಮಕ; ಡಾ. ಎಂ.ಸಿ ಸುಧಾಕರ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.