ಬೆಂಗಳೂರು: ಮುಂಬರುವ 2024ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ದೇಶದ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಅತ್ಯುತ್ತಮ ಪ್ರಣಾಳಿಕೆ ರೂಪಿಸಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಒಟ್ಟು 16 ಸದಸ್ಯರ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ ರಚಿಸಿರುವ ಕಾಂಗ್ರೆಸ್, ಸಿಎಂ ಸಿದ್ದರಾಮಯ್ಯರಿಗೂ ಅವಕಾಶ ನೀಡಿದೆ.


COMMERCIAL BREAK
SCROLL TO CONTINUE READING

‘ಪಂಚ ಗ್ಯಾರಂಟಿ ಯೋಜನೆ’ಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತದ ಸರ್ಕಾರ ರಚಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯರ ಕೊಡುಗೆಯೂ ಹೆಚ್ಚಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಅವರ ಅನುಭವವನ್ನು ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧಿಸಿದ್ದು, ಮಹತ್ವದ ಜವಾಬ್ದಾರಿ ನೀಡಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಸಿದ್ಧಪಡಿಸಿತ್ತು. ಇದೀಗ ಲೋಕಸಭಾ ಚುನಾವಣೆಗೆ ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಣಾಳಿಕೆ ರೂಪಿಸಿ ದೇಶದ ಜನರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ. ಹೀಗಾಗಿ ಪಕ್ಷದ ಅನುಭವಿಗಳು ಮತ್ತು ಹಿರಿಯರನ್ನು ಬಳಸಿಕೊಳ್ಳುತ್ತಿದೆ.  


ಇದನ್ನೂ ಓದಿ: ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ


ಈ ಪ್ರಣಾಳಿಕೆ ಸಮಿತಿಯಲ್ಲಿ ಒಟ್ಟು 16 ಮಂದಿ ಇದ್ದಾರೆ. ಸಮಿತಿಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅಧ್ಯಕ್ಷರಾಗಿದ್ದರೆ, ಟಿಎಸ್ ಸಿಂಗ್ ದೇವ್ ಅವರು ಸಂಚಾಲಕರಾಗಿದ್ದಾರೆ. 3ನೇ ಸ್ಥಾನದಲ್ಲಿಯೇ ಸಿದ್ದರಾಮಯ್ಯರ ಹೆಸರಿದೆ. 4ನೇ ಸ್ಥಾನದಲ್ಲಿ ಪ್ರಿಯಾಂಕಾ ವಾದ್ರಾ, 5ನೇ ಸ್ಥಾನದಲ್ಲಿ ಆನಂದ್ ಶರ್ಮಾ, 6ನೇ ಸ್ಥಾನದಲ್ಲಿ ಜೈರಾಮ್ ರಮೇಶ್, 7ನೇ ಸ್ಥಾನದಲ್ಲಿ ಶಶಿ ತರೂರ್ ಇದ್ದಾರೆ.   ಇನ್ನುಳಿದಂತೆ ಗೈಖಂಗಮ್ ಗ್ಯಾಂಗ್ಮೇ(Gaikhangam Gangmei), ಗೌರವ್ ಗೋಗೋಯ್, ಪ್ರವೀಣ್‌ ಚಕ್ರವರ್ತಿ, ಇಮ್ರಾನ್‌ ಪ್ರತಾತ್‌ಗಢಿ, ಕೆ.ರಾಜು, ಓಂಕಾರ್‌ ಸಿಂಗ್‌ ಮಾರ್ಕಂ, ರಂಜೀತ್‌ ರಂಜನ್‌, ಜಿಗ್ನೇಶ್‌ ಮೇವಾನಿ ಮತ್ತು ಗುರುದೀಪ್‌ ಸಪ್ಪಲ್ ಅವರು ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.


ಖರ್ಗೆಗೆ ಸಿದ್ದರಾಮಯ್ಯ ಧನ್ಯವಾದ


ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ ಖಂಡನೀಯ: ಬಸವರಾಜ ಬೊಮ್ಮಾಯಿ


‘ನಮ್ಮ ಸರ್ಕಾರದ  ‘ಕರ್ನಾಟಕ ಮಾದರಿ’ ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನರು ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಈ ‘ಕರ್ನಾಟಕ ಮಾದರಿ ಆಡಳಿತ’ಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ. ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ, ಜನತೆಗೆ ನಾವು ನೀಡುವ ವಚನವಾಗಿದ್ದು, ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು’ ಎಂದು ತಿಳಿಸಿದ್ದಾರೆ.


‘ಹಿಂದಿನ ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು - ಸಮಬಾಳು’ ನೀಡುವ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆಯನ್ನು ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡಾ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡ ಕರ್ನಾಟಕ ಮಾದರಿ ಆಡಳಿತದ ಅನುಕೂಲಗಳನ್ನು ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ. ನನ್ನ ಎಲ್ಲಾ ಯೋಚನೆ-ಯೋಜನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವ ಪಕ್ಷದ ಹಿರಿಯರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.