ಸೌಲಭ್ಯವಂಚಿತ ಮಹಿಳೆಯ ಸಂಕಷ್ಟಕ್ಕೆ ಮೀಡಿದ ಸಿಎಂ ಸಿದ್ದರಾಮಯ್ಯ
ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಈಗ ಬಡ ಮಹಿಳೆಯ ನೆರವಿಗೆ ಮುಂದಾಗಿದ್ದಾರೆ.ಸ್ವಂತ ಮನೆಯಾಗಲೀ, ಆಧಾರ್ ಕಾರ್ಡ್ ಆಗಲೀ ಮತ್ತು ಪಡಿತರ ಚೀಟಿಯಾಗಲೀ ಯಾವುದೇ ಸೌಲಭ್ಯವಿಲ್ಲದೆ ವಂಚಿತಳಾಗಿದ್ದ ಮಹಿಳೆಯ ಪರಿಸ್ಥಿತಿಯನ್ನು ಗಮನಿಸಿದ ಅವರು ಈಗ ಅಧಿಕಾರಿಗಳಿಗೆ ಶೀಘ್ರದಲ್ಲೇ ಪಡಿತರ ಚೀಟಿಯನ್ನು ಒದಗಿಸಲು ಸೂಚಿಸಿದ್ದಾರೆ.
ಬೆಂಗಳೂರು: ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಈಗ ಬಡ ಮಹಿಳೆಯ ನೆರವಿಗೆ ಮುಂದಾಗಿದ್ದಾರೆ.ಸ್ವಂತ ಮನೆಯಾಗಲೀ, ಆಧಾರ್ ಕಾರ್ಡ್ ಆಗಲೀ ಮತ್ತು ಪಡಿತರ ಚೀಟಿಯಾಗಲೀ ಯಾವುದೇ ಸೌಲಭ್ಯವಿಲ್ಲದೆ ವಂಚಿತಳಾಗಿದ್ದ ಮಹಿಳೆಯ ಪರಿಸ್ಥಿತಿಯನ್ನು ಗಮನಿಸಿದ ಅವರು ಈಗ ಅಧಿಕಾರಿಗಳಿಗೆ ಶೀಘ್ರದಲ್ಲೇ ಪಡಿತರ ಚೀಟಿಯನ್ನು ಒದಗಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ-ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಬೇಕೆ? ಈ ಸೂಪರ್ ಡ್ರಿಂಕ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ!
ಈ ಕುರಿತಾಗಿ ಬರೆದುಕೊಂಡಿರುವ ಸಿಎಂ ಕಚೇರಿ "ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾರುತಿಪುರ ಸಮೀಪದ ಮೇಲಿನಸಂಪಳ್ಳಿ ಗ್ರಾಮದ ನಿವಾಸಿ ಶಶಿಕಲಾ ಅವರ ಸಂಕಷ್ಟದ ಬದುಕಿಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿದ್ದೇವೆ. ಕಡುಬಡತನದ ಜೊತೆಗೆ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿರುವ 20 ವರ್ಷದ ಮಗಳ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿರುವ ಶಶಿಕಲಾ ಅವರ ಬಳಿ ಸ್ವಂತ ಮನೆಯಾಗಲೀ, ಆಧಾರ್ ಕಾರ್ಡ್ ಆಗಲೀ ಮತ್ತು ಪಡಿತರ ಚೀಟಿಯಾಗಲೀ ಈ ಯಾವುದು ಇಲ್ಲದಿರುವ ಕಾರಣಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯವೂ ಸೇರಿ ಇನ್ನಿತರೆ ಯೋಜನೆಯಿಂದ ವಂಚಿತರಾಗಿದ್ದರು.
ಹಲವು ಪ್ರಯತ್ನಗಳ ಬಳಿಕವೂ ತೂಕ ಇಳಿಕೆಯಾಗುತ್ತಿಲ್ಲವೇ? ಈ ಆಹಾರದ ಕಾಂಬಿನೇಷನ್ ಟ್ರೈ ಮಾಡಿ !
ಈ ವಿಚಾರವನ್ನು ಪತ್ರಕರ್ತರಾದ ರವಿ ಬಿದನೂರು ಅವರು ನಮ್ಮ ಕಚೇರಿಯ ಗಮನಕ್ಕೆ ತಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಅವರ ಮನೆಗೆ ಕಳುಹಿಸಿ ಆಧಾರ್ ಕಾರ್ಡ್ ಅಪ್ಲೋಡ್ ಮಾಡಿಸಲಾಗಿದೆ.ಜೊತೆಗೆ ಆದಷ್ಟು ಶೀಘ್ರ ತಾಯಿ ಮಗಳಿಗೆ ಪಡಿತರ ಚೀಟಿಯನ್ನು ಒದಗಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಸೌಲಭ್ಯ ವಂಚಿತ ಬಡ ತಾಯಿ -ಮಗಳ ಬದುಕಿಗೆ ಆಸರೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ