ಬೆಂಗಳೂರು: ನೂತನ ಸರ್ಕಾರದಲ್ಲಿ 24 ಸಚಿವರು ಇಂದು ರಾಜಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.ಸಿದ್ದರಾಮಯ್ಯ ಸರ್ಕಾರದಲ್ಲಿನ ಈ ಸಚಿವ ಸಂಪುಟದಲ್ಲಿ ಪ್ರದೇಶವಾರು ಹಾಗೂ ಜಾತಿವಾರು ಪ್ರಾತಿನಿಧ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Karnataka Cabinet List: ʼಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದುʼ


ಈಗ ಪೂರ್ಣ ಪ್ರಮಾಣದ ಸಚಿವ ಸಂಪುಟದ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಶುಭಕೋರಿದ್ದಾರೆ."ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ಸಹೋದ್ಯೋಗಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.ಒಂದು ಸರ್ಕಾರವಾಗಿ ನಾವೆಲ್ಲರೂ ಜನರ ಸಮಸ್ಯೆಗಳಿಗೆ ಅಂತಃಕರಣದಿಂದ ಸ್ಪಂದಿಸುವ ಮೂಲಕ ನಮ್ಮ ಮೇಲಿನ ನಂಬಿಕೆ ಮತ್ತು ನಿರೀಕ್ಷೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ.ನಿಮ್ಮ ಎಲ್ಲಾ ಜನಪರ,ಸಂವಿಧಾನಬದ್ಧ ಕಾರ್ಯಗಳಿಗೆ ನನ್ನ ಪೂರ್ಣ ಸಹಕಾರ ಇದೆ" ಎಂದು ಅವರು ಹೇಳಿದ್ದಾರೆ.


ಸಿದ್ದು ಸಂಪುಟ ಖಾತೆ ಹಂಚಿಕೆ : ಗೃಹ ಸಚಿವರು ಯಾರು..! ಡಿಕೆಶಿಗೆ ಯಾವ ಖಾತೆ..?


ಇನ್ನೂ ಪಕ್ಷ ನೀಡಿರುವ ಭರವಸೆಗಳ ಕುರಿತಾಗಿ ಮಾತನಾಡುತ್ತಾ 'ನಾವು ಕೊಟ್ಟಿರುವ ಭರವಸೆ ಈಡೇರಿಸಬೇಕು. ಜನ ನಮಗೆ ಬೆಂಬಲ ನೀಡಿದ್ದಾರೆ.ಗ್ಯಾರಂಟಿಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡ್ತೀವಿ.ವಿಪಕ್ಷಗಳು ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ,ಆದರೆ ನಾವು ಎಲ್ಲ ಭರವಸೆ ಈಡೇಸುತ್ತೇವೆ. ಇದಕ್ಕೆ ಸಂಬಂಧಿಸಿದ ಎಲ್ಲ ಅಂಕಿ ಅಂಶ ಪಡೆದು ಮುಂದಿನ ಕ್ಯಾಬಿನೆಟ್ ನಲ್ಲಿ ಐದು ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.


ಸಚಿವ ಸಂಪುಟದ ಆಯ್ಕೆ ಮಾನದಂಡದ ಕುರಿತಾಗಿ ಮಾತನಾಡಿದ ಅವರು 'ಕೆಲವು ಮಾನದಂಡದ ಮೇಲೆ ಸಂಪುಟ ರಚಿಸಿದ್ದೇವೆ.ಕೊಡಗು ಕೊಟ್ಟಿಲ್ಲ,ಹಾಸನಕ್ಕೆ ಕೊಟ್ಟಿಲ್ಲ,ಚಿಕ್ಕಮಗಳೂರಿಗೆ ಕೊಟ್ಟಿಲ್ಲ,ಹಾಸನಕ್ಕೆ  ಕೊಟ್ಟಿಲ್ಲ,ಹಾವೇರಿಗೆ ಕೊಟ್ಟಿಲ್ಲ,ಹೊಸಬರಿಗೆ ಕೊಟ್ಟಿಲ್ಲ.ಸಮಾಧಾನ, ಅಸಮಧಾನ ಯಾವತ್ತೂ ಇರೊದೆ, ಅಸಮಧಾನದ ಜೊತೆ ಸಮಾಧಾನ ಇದೆ ಹಾಗಾಗಿ ಎಲ್ಲರು ಒಪ್ಪಿಕೊಂಡಿದ್ದಾರೆ" ಎಂದು ಅವರು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ