ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹಾರಿದ್ದ ಬಾಂಬೆ ಬಾಯ್ಸ್ ಎಂದೇ ಕರೆಯಲ್ಪಡುವ ನಾಯಕರಿಗೆ ಮತ್ತೆ ಕಾಂಗ್ರೆಸ್ ಗೆ ಬರುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಬಿಜೆಪಿ ವಲಸೆ ಶಾಸಕರು ಮತ್ತೆ ಕಾಂಗ್ರೆಸ್ ಗೆ ಬಂದರೆ ಹೆಚ್ಚಿನ ಸ್ಥಾನಗಳನ್ನ ಗೆಲ್ಲಬಹುದು ಎಂಬ ಲೆಕ್ಕಾಚಾರ ಕೈ ಹಿರಿಯ ನಾಯಕರಲ್ಲಿದೆ. ಈ ಪೈಕಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವ ವಹಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ವಿಭಿನ್ನ ನಿಲುವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. 


ಲೋಕಸಭಾ ಚುನಾವಣೆ ಗೆಲ್ಲಲು ಡಿಸಿಎಂ ಡಿಕೆ ಶಿವಕುಮಾರ್ ಸಜ್ಜಾಗುತ್ತಿದ್ದಾರೆ. ಈ ಪ್ರಕಾರ ಬೆಂಗಳೂರು ಶಾಸಕರನ್ನ ಸೆಳೆಯಲು ಯೋಜನೆ ರೂಪಿಸುತ್ತಿದ್ದಾರೆ. ಬಿಜೆಪಿ ಭದ್ರಕೋಟೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಿದ್ದರಾಗುತ್ತಿದ್ದಾರೆ. ನಗರದ ಪ್ರಭಾವಿ ಶಾಸಕರಾದ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ, ಗೋಪಾಲಯ್ಯ ಸೆಳೆಯಲು ಡಿಕೆ ಮುಂದಾಗಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!


ಡಿಕೆಶಿ ನಡೆಗೆ ಸಿಎಂ ಸಿದ್ದರಾಮಯ್ಯ ಬ್ರೇಕ್!:
ಇನ್ನೂ ಬಾಂಬೆ ಬಾಯ್ಸ್ ಘರ್ ವಾಪ್ಸಿ ಬಗ್ಗೆ ವಿಭಿನ್ನ ನಡೆ ಅನುಸರಿಸಿರುವ ಸಿಎಂ ಸಿದ್ದರಾಮಯ್ಯ, ಆಪರೇಷನ್ ಹಸ್ತ ಪಾಲಿಟಿಕ್ಸ್ ಬೇಡ ಎಂದು ಸೂಚನೆ ನೀಡಿದ್ದು, ಸದನದಲ್ಲಿ ಘರ್ ವಾಪ್ಸಿ ಮಾಡಲ್ಲ ಎಂದಿದ್ದೇನೆ. ಸ್ಪೀಕರ್ ರಮೇಶ್ ಕುಮಾರ್ ಹೇಳಿದಾಗ ಪಕ್ಷ ಬಿಟ್ಟು ಹೋದವರನ್ನ ವಾಪಸು ತೆಗೆದುಕೊಳ್ಳುವುದಿಲ್ಲ ಎಂದೂ ಹೇಳಿದ್ದೇನೆ, ಎಂದಿದ್ದಾರೆ.


ಇದಲ್ಲದೆ  ಬೈರತಿ ವಿಚಾರದಲ್ಲಿ ಯಾಕೆ ಅಷ್ಟು ವಿರೋಧ ಎಂದರೆ, 2017 ರಲ್ಲಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದಿತ್ತು ಗಲಾಟೆ. ಜಾರ್ಜ್ ವಿರುದ್ಧ ಗಲಾಟೆ ಮಾಡಿದ್ದ ಬೈರತಿ ಬಸವರಾಜ್, ಅಂದು ನಡೆದ ಗಲಾಟೆಯಲ್ಲಿ ಸಿದ್ದರಾಮಯ್ಯ ಬೈರತಿ ಬಸವರಾಜ  ಜಾರ್ಜ್ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದರು.  ಇದರಿಂದಾಗಿ ಬೈರತಿ ಬಸವರಾಜ್ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಅಂದಿನಿಂದಲೂ ಬಸವರಾಜ ದೂರ ಇಟ್ಟು ಸುರೇಶ್ ಗೆ ಆದ್ಯತೆ ನೀಡಿದ್ದರು ಸಿದ್ದರಾಮಯ್ಯ. ಹೀಗಾಗಿ ಆಪರೇಷನ್ ಹಸ್ತ ದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಾಸಕರ ಸೇರ್ಪಡೆಗೆ  ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- ಹಾವೇರಿ ಅಖಾಡದಲ್ಲಿ ಈಶ್ವರಪ್ಪ ಲೋಕಸಭೆ ತಾಲೀಮು.. ಬಿಜೆಪಿ ಹಿರಿಯರಿಗೆ ಶುರುವಾಯ್ತು ಟಿಕೆಟ್ ಟೆನ್ಶನ್


ಸಿದ್ದರಾಮಯ್ಯ ವಿರೋಧದ ನಡುವೆಯೂ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳಲು  ಮುಂದಾಗ್ತಾರಾ ಡಿಕೆಶಿ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಉಭಯ ನಾಯಕರ ಬಿನ್ನಾಭಿಪ್ರಾಯದ ಬೆಂಕಿಗೆ ವಲಸೆ ಶಾಸರ ಘರ್ ವಾಪ್ಸಿ ವಿಚಾರ ತುಪ್ಪವಾಗತ್ತಾ? ಎಂದು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.