ಸಿದ್ದು- ಪ್ರಸಾದ್ ಭೇಟಿ ವಿಶೇಷವಲ್ಲ ಅದೊಂದು ವಿಚಿತ್ರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹೇಶ್
ರಾಜಕೀಯದಲ್ಲಿ ಒಂದೊಂದು ನಿಮಿಷಕ್ಕೆ ಒಂದೊಂದು ತಿರುವು ಇರಲಿದೆ. ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿರುವ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲವನ್ನು ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗೆ ತಿಳಿಸಿದ್ದಾರೆ ಇದರ ನಡುವೆ ಈ ಎಲ್ಲಾ ವಿಚಿತ್ರಗಳು ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಶ್ರೀನಿವಾಸಪ್ರಸಾದ್ ಭೇಟಿ ಮಾಡಿರುವುದು ವಿಶೇಷವಲ್ಲ, ಅದೊಂದು ವಿಚಿತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಸಿಎಂ ಸಿದ್ದರಾಮಯ್ಯ (CM Siddaramaiah)- ಸಂಸದ ಶ್ರೀನಿವಾಸಪ್ರಸಾದ್ (Srinivas Prasad) ಭೇಟಿ ಮಾಡಿರುವುದು ವಿಚಿತ್ರ. ಈಗಾಗಲೇ, ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ- ತಮ್ಮ ಹೇಳಿಕೆ ಬಗ್ಗೆ ವಿಷಾದ : ರಾಜ್ಯದ ಮಹಿಳೆಯರ ಕ್ಷಮೆ ಕೋರಿದ ಹೆಚ್.ಡಿ ಕುಮಾರಸ್ವಾಮಿ
ಸಂಸದ ಶ್ರೀನಿವಾಸ್ ಪ್ರಸಾದ್, ತಮ್ಮ ಅಂತರಾಳದ ಮಾತುಗಳನ್ನು ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪ (BS Yediyurapp) ಹಾಗೂ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗೆ ತಿಳಿಸಿದ್ದಾರೆ ಇದರ ನಡುವೆ ಈ ಎಲ್ಲಾ ವಿಚಿತ್ರಗಳು ನಡೆಯುತ್ತಿದೆ ಎಂದು ಸಿಎಂ ಭೇಟಿಗೆ ವ್ಯಂಗ್ಯ ಮಾಡಿದರು.
ಇದನ್ನೂ ಓದಿ- "ಬಡವರಿಗೆ ಮನೆ ಕಟ್ಟಿಕೊಡಲು ವಿಫಲವಾದ ಬಿಜೆಪಿಯ ವಿ.ಸೋಮಣ್ಣ ಲೋಕಸಭೆಯಲ್ಲಿ ಏನು ಮಾಡುತ್ತಾರೆ"
ಚಾಮರಾಜನಗರ ಲೋಕಸಭಾ ಕ್ಷೇತ್ರ (Chamarajanagar Lok Sabha Constituency)ದಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಹೊಂದಿದ್ದು ಹುಷಾರಾಗಿ ಕೆಲಸ ಮಾಡಿ, ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್ ಕೂಡ ಬಿಜೆಪಿಗೆ ಬೆಂಬಲ ಕೊಡಲಿದ್ದಾರೆ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.