ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇಲ್ಲದಿದ್ರೆ ನಾನು, ಸಿಟಿ ರವಿ ಮತ್ತು ಕೆ.ಎಸ್.ಈಶ್ವರಪ್ಪ ಕುರಿ ಮೇಯಿಸ್ತಾ ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಂಡರು.


COMMERCIAL BREAK
SCROLL TO CONTINUE READING

ಶತಶತಮಾನಗಳಿಂದ ಶೇ.90 ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಪ್ರೇರಣೆ. ಹೀಗಾಗಿ ಈ ದೇಶದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಿಧಾನ ಇದೆ. ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ಮಾಡಲು ಸಾಧ್ಯವಿಲ್ಲ.‌ ಒಂದು ವೇಳೆ ಸಂವಿಧಾನ ಇಲ್ಲದೇ ಹೋಗಿದ್ದರೆ ನಾವ್ಯಾರು ಶಾಸಕರಾಗುತ್ತಿರಲಿಲ್ಲ ಎಂದು ಹೇಳಿದರು.


CM Siddaramaiah: ಬಡಜನರಿಗೆ ಅನ್ನ ನೀಡುವ ಸಾರ್ಥಕ ಉದ್ದೇಶದಿಂದ ರೂಪಿಸಿದ ಯೋಜನೆ ಅನ್ನಭಾಗ್ಯ : ಸಿಎಂ ಸಿದ್ದರಾಮಯ್ಯ


ಪ್ರತಿಯೊಬ್ಬರೂ ಸದನ ನಡೆಯುವಾಗ ನಿಯಮಾವಳಿ ತಪ್ಪದೇ ಓದಬೇಕು. ಅಸೆಂಬ್ಲಿಯನ್ನು ದೇಗುಲ ಎನ್ನುತ್ತೇವೆ. ಜನರ ಜೊತೆಗೆ ಚೆನ್ನಾಗಿದ್ದು, ಅವರ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಬೇಕು. ನಾನು ಕಾಂಗ್ರೆಸ್ ಮುಖ್ಯಮಂತ್ರಿಯಲ್ಲ, ರಾಜ್ಯಕ್ಕೆ ಮುಖ್ಯಮಂತ್ರಿ. ಮತ ಹಾಕದವರಿಗೂ ಮುಖ್ಯಮಂತ್ರಿ. ಈ ಭಾವನೆ ನಮ್ಮಲ್ಲಿರಬೇಕು. ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಿ, ಇಲ್ಲದೇ ಹೋದರೆ ಒಳ್ಳೆಯ ಸಂಸದೀಯ ಪಟುವಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.


Bakrid Festival: ಬಕ್ರೀದ್ ಹಬ್ಬ/ಧಾರ್ಮಿಕ ಆಚರಣೆಗಳಲ್ಲಿ ಅನಧಿಕೃತ ಪ್ರಾಣಿವಧೆ ನಿಷೇಧ


ದುಡ್ಡಿನಿಂದ ಗೆದ್ದು ಬರುತ್ತೇವೆ ಎಂದುಕೊಂಡರೆ ಮರು ಆಯ್ಕೆ ಆಗಲ್ಲ. ಇದು ನನ್ನ ಅನುಭವ. ಈಗ ಚುನಾವಣೆ ದುಬಾರಿಯಾಗುತ್ತಿದೆ. ಅರ್ಹರು, ಪ್ರಾಮಾಣಿಕರು ಶಾಸಕರಾಗುವುದು ವಿರಳ. ಕೆಲವು ಬಾರಿ ಜನಪರ ಕಾಳಜಿ ಇಲ್ಲದವರು ಗೆದ್ದು ಬರುತ್ತಾರೆ. ಅಂತವರು 2ನೇ ಬಾರಿ ಗೆಲ್ಲುವುದು ಕಷ್ಟವಾಗುತ್ತದೆ. ಜನಪರ ಕೆಲಸ ಮಾಡುವವರು ರಾಜಕಾರಣದಲ್ಲಿ ಉಳಿಯುತ್ತಾರೆ ಎಂದು ಸಿದ್ದರಾಮಯ್ಯನವರು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.