ಬೆಂಗಳೂರು: ಹಲವು ದಿನಗಳಿಂದ ಸಿಎಂ ಸಿದ್ದರಾಮಯ್ಯನವರು  ಬಾದಾಮಿಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ದಟ್ಟವಾಗಿದ್ದವು. ಈಗ ಈ ವಿಚಾರಕ್ಕೆ ಕೊನೆಗೋ ತೆರೆಬಿದ್ದಿದೆ. ಹೌದು ಬಾದಾಮಿಯಲ್ಲಿ ಈಗ ಸಿಎಂ  ಸ್ಪರ್ಧಿಸುವ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡಾ  ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸುವ ಸಂಗತಿ ಸ್ಪಷ್ಟವಾಗಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಈಗಾಗಲೇ ಮಾತುಕತೆ ನಡೆಸಿರುವ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸಿದರೆ ಕನಿಷ್ಠ ಎಂಟತ್ತು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಲಾಭವಾಗುವ ಸಂಗತಿಯನ್ನು ವಿವರಿಸಿದ್ದಾರೆ ಎನ್ನಲಾಗಿದೆ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲಿ ಹಿಂದುಳಿದ ವರ್ಗಗಳ ಮತಗಳ ಧ್ರುವೀಕರಣಕ್ಕೆ  ನೆರವಾಗಬಹುದು ಎಂದು ತಿಳಿಸಿದ್ದಾರೆ.


ಈಗ ಸಿದ್ದರಾಮಯ್ಯನವರ ಮಾತಿಗೆ ಒಪ್ಪಿಗೆ ಸೂಚಿಸಿರುವ ಹೈಕಮಾಂಡ್  ಈಗಾಗಲೇ ಹಸಿರು ನಿಶಾನೆ ತೋರಿಸಿದೆ.ಇನ್ನು ಅಧಿಕೃತ ಘೋಷಣೆಯೊಂದೆ ಬಾಕಿ ಎನ್ನಲಾಗಿದೆ. ಆ ಮೂಲಕ ಸಿದ್ದರಾಮಯ್ಯನವರು ಎರಡು ಕಡೆ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಮೂಲಕ ಮತ ಭೇಟೆಗೆ ಮುಂದಾಗಿದ್ದಾರೆ.


ಬಾದಾಮಿಯಲ್ಲಿ ಸ್ಪರ್ಧಿಸುವ ವಿಚಾರ ಅಧಿಕೃತವಾಗಿ ಘೋಷಣೆಯಾದ ನಂತರ ಈ ಕ್ಷೇತ್ರದ ಉಸ್ತುವಾರಿಯನ್ನು ಹೆಚ್.ಎಂ. ರೇವಣ್ಣ ವಹಿಸಲಿದ್ದಾರೆ.