ಬೆಂಗಳೂರು: ಕನ್ನಡ ಖ್ಯಾತ ಹಾಸ್ಯ ನಟ ರಂಗಾಯಣ ರಘು ತಮ್ಮ ನಟನೆಗಳ ಮೂಲಕ ರಂಜಿಸಿದ್ದ ಈ ನಟ ಇಗ ರಾಜಕೀಯದ ಮೂಲಕ ತಮ್ಮ ನಿಜ ಜೀವನದಲ್ಲಿ ಮತ್ತೊಂದು ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಈ ವಿಷಯ ನೀವು ನಂಬಲೆಬೇಕು,ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಹಲವು ತಿಂಗಳುಗಳ ಕಾಲಾವಧಿ ಇದೆ ಆದರೂ ಎಲ್ಲಾ ಪಕ್ಷಗಳು ಇಗಲೇ ತಯಾರಿಯನ್ನು ಪ್ರಾರಂಭಿಸಿವೆ.ಆ ನಿಟ್ಟಿನಲ್ಲಿ  ಜೆಡಿಎಸ್ ಪಕ್ಷವು ನಟ ರಂಗಾಯಣ ರಘುರವರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ,ಈ ಕುರಿತಾಗಿ ಮಾತನಾಡಿದ ರಂಗಾಯಣ ರಘು ನಾನು ಚಿಕ್ಕವರಿಂದಲೂ ಅಪ್ಪ-ಅಣ್ಣ ಇಬ್ಬರು 'ಜೆಡಿಎಸ್' ನಲ್ಲೇ ಕೆಲಸ ಮಾಡಿದವರು ಹಾಗಾಗಿ ಆ ಪಕ್ಷದ ಮೇಲೆ ಅಕ್ಕರೆ ಮತ್ತು ಅವರು ಮಾಡಿರೋ ಕೆಲಸಗಳು ನೆನಪಿದೆ. ಪಾವಗಡ ನಮ್ಮ ಸ್ವಂತ ಊರು ಅಲ್ಲಿಗೆ ಇಲ್ಲಿ ತನಕ ಹೆಚ್ಚಾಗಿ ಬಂದಿರೋದು ದೇವೇಗೌಡರು ಹಾಗೂ ಕುಮಾರಣ್ಣ ಹಾಗಾಗಿ ಅದೇ ಪಕ್ಷ ಇಷ್ಟವಾಗುತ್ತೆ" ಎಂದು ತಿಳಿಸಿದರು  ಅಲ್ಲದೆ ರೈತರು ಪಡುತ್ತಿರೋ ಕಷ್ಟದ ಹೊರೆಯನ್ನ ಸ್ಪಲ್ವನಾದರು ಕಡಿಮೆ ಮಾಡೋ ಕೆಲಸ ಮಾಡುತ್ತೇನೆ ವರ್ಷಗಟ್ಟಲೆ ತಿಂಗಳುಗಟ್ಟಲೆ ಕಷ್ಟ ಪಟ್ಟು ಬೆಳೆಯೋ ಬೆಳೆಗೆ ಸರಿಯಾದ ಬೆಲೆ ಸಿಗಬೇಕು ಅದಕ್ಕಾಗಿ ರೈತರ ಪರವಾದ ಪಕ್ಷವನ್ನ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಿದರು. 


ಅಲ್ಲದೆ ಅವರಿಗೆ ತುಮಕೂರು  ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕೂಡಾ  ಕಣಕ್ಕಿಳಿಸಲು ಜೆಡಿಎಸ್ ಪಕ್ಷವು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಹಿಂದೆ 2008 ರಲ್ಲಿ ಇದೆ ಮಧುಗಿರಿಯ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರ ಸ್ವಾಮಿಯವರು ಚುನಾವಣಾಯಲ್ಲಿ ಗೆಲುವು ಸಾಧಿಸಿದ್ದನ್ನು ನಾವು ಗಮನಿಸಬಹುದು.