ಬೆಂಗಳೂರು : ರಾಜಧಾನಿ ಬೆಂಗಳೂರಿನ (Bengaluru) ನೆತ್ತಿ ಮೇಲೆ ರೂಪಾಂತರಿ ಕರೋನಾ (Coronavirus) ತೂಗುಗತ್ತಿ ನೇತಾಡುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಬ್ರಿಟನ್ ನಿಂದ ಬಂದವರು ಹೋಗಿದ್ದಾದರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ  ರೂಪಾಂತರಿತ ಕರೋನಾ (Mutated Virus) ಸ್ಫೋಟಿಸಲಿದೆಯಾ ಎಂಬ ಆತಂಕ ಈಗ ಕಾಡಲು ಶುರುವಾಗಿದೆ. 


COMMERCIAL BREAK
SCROLL TO CONTINUE READING

ಬಿಬಿಎಂಪಿಯದ್ದು ಒಂದು ಲೆಕ್ಕ, ಸರ್ಕಾರದ್ದು ಇನ್ನೊಂದು ಲೆಕ್ಕ.
ಬ್ರಿಟನ್ ನಿಂದ ಬಂದವರು ಕಡ್ಡಾಯ ಕ್ವಾರಂಟೈನ್ ಗೆ (Quarantine) ಹೋಗಬೇಕು. ಇಂತದ್ದರಲ್ಲಿ ಬ್ರಿಟನ್ (Britain) ನಿಂದ ನೇರ ಬೆಂಗಳೂರಿಗೆ ಬಂದವರಲ್ಲಿ ಹಲವರು ಕ್ವಾರಂಟೈನ್ ನಲ್ಲಿದ್ದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ.  ಅಷ್ಟೇ ಅಲ್ಲ, ಅಲ್ಲೊಂದು ಲೋಪವೂ ಬೆಳಕಿಗೆ ಬಂದಿದೆ. ಬ್ರಿಟನ್ ನಿಂದ ಬಂದು ನಾಪತ್ತೆಯಾದವರು 114 ಮಂದಿ ಎಂದು ಬಿಬಿಎಂಪಿ (BBMP) ಹೇಳುತ್ತಿದೆ. ಬ್ರಿಟನ್ ನಿಂದ ಬಂದು ಮಿಸ್ಸಿಂಗ್ ಆದವರು 74 ಮಂದಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Sudhakar) ಹೇಳುತ್ತಿದ್ದಾರೆ. 


ALSO READ: Covaxin Vaccine ಅನ್ನು'ನೀರು' ಎಂದು ಕರೆದ ಪೂನಾವಾಲಾಗೆ ಕೃಷ್ಣಾ ಇಲ್ಲಾ ತಿರುಗೇಟು


ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದೇನು..?
114 ಜನ ಪ್ರಯಾಣಿಕರು ಮಿಸ್ಸಿಂಗ್ ವಿಚಾರದಲ್ಲಿ ಸಚಿವ ಡಾ. ಸುಧಾಕರ್ (Dr K Sudhakar) ಅವರನ್ನು ಪ್ರಶ್ನಿಸಿದಾಗ ಅವರು ಮಾಧ್ಯಮಗಳ ಮುಂದೆ ಹೇಳಿದಿಷ್ಟು.
ಬಿಬಿಎಂಪಿ ಕಮಿಷನರ್ ಜೊತೆ ಮಾತನಾಡ್ತಿದ್ದೇನೆ. ನಮ್ಮ ಇಲಾಖೆಗೆ  ಬಂದಿರುವ ಮಾಹಿತಿ ನಾನು ನೀಡುತ್ತಿದ್ದೇನೆ.  ನಮ್ಮಲ್ಲಿ 75 ಜನರ ಮಾಹಿತಿ ಮಾತ್ರ  ಇದೆ. ಬಿಬಿಎಂಪಿಯವರು ಕಾಂಟ್ಯಾಕ್ಟ್ ಸೇರಿಸಿ ಹೇಳುತ್ತಿದ್ದಾರೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. 


ಮಿಸ್ಸಿಂಗ್ ಆದವರು ಎಲ್ಲಿದ್ದಾರೆ ಈಗ..?
ಮಿಸ್ಸಿಂಗ್ ಆಗಿದ್ದು 114 ಮಂದಿಯೋ 74 ಮಂದಿಯೋ ಎಂಬ ಗೊಂದಲದ ನಡುವೆಯೇ, ಮಿಸ್ಸಿಂಗ್ ಪ್ರಯಾಣಿಕರು ಎಲ್ಲಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅವರನ್ನು ಹುಡುಕುವ ಪ್ರಯತ್ನ ವಿಫಲವಾಗಿದೆ. ಮೊಬೈಲ್ (Mobile) ಸ್ವಿಚ್ ಆಫ್ ಆಗಿದೆ.  ಒಂದು ವೇಳೆ ಅವರು ರೂಪಾಂತರಿತ ಕರೋನಾ (Coronavirus) ಸೋಂಕಿತರಾಗಿದ್ದರೆ, ಆಗುವ ಅನಾಹುತಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.