ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಸರ್ಕಾರ ಜುಲೈ 7ಕ್ಕೆ ಬಜೆಟ್ ಮಂಡನೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಆಯವ್ಯಯ ಮಂಡನೆಯಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಲಿದ್ದಾರೆ ಎಂದು ಅಂದಾಜು ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ


ಕಾಂಗ್ರೆಸ್ ಪಂಚ ಗ್ಯಾರೆಂಟಿ ಅನುಷ್ಠಾನಕ್ಕೆ ಸುಮಾರು ₹50,000 ರಿಂದ ₹60,000 ಕೋಟಿ ಅಗತ್ಯ ಇದೆ ಎಂದು ಹಣಕಾಸು ಇಲಾಖೆ ವರದಿ ನೀಡಿದೆ. ಹಣಕಾಸಿನ ಕ್ರೋಢೀಕರಣಕ್ಕೆ ಕೆಲ ವಸ್ತುಗಳ ಬೆಲೆ ಏರಿಕೆ ಆದರೆ ಮಾತ್ರ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.


ಪೆಟ್ರೋಲ್ -ಡೀಸಲ್ ಸೆಸ್ ಹೆಚ್ಚಳ :


ಉಕ್ರೇನ್ -ರಷ್ಯಾ ರಾಷ್ಟ್ರಗಳ ನಡುವೆ ಯುದ್ಧ ಹಿನ್ನಲೆ ಪೆಟ್ರೋಲ್ ಬೆಲೆ ಏರಿಕೆ ಆಗಿತ್ತು, ಹೀಗಾಗಿ ಅಂದಿನ ಬಿಜೆಪಿ ಸರ್ಕಾರ ಪೆಟ್ರೋಲ್ 35% ಸೆಸ್ ನನ್ನು  25.9% ಇಳಿಕೆ ಮಾಡಲಾಗಿತ್ತು. ಜೊತೆಗೆ ಡೀಸಲ್ ಮೇಲೆ ಇದ್ದ ಸುಂಕ 24% ಇಂದ 14.34% ಗೆ ಇಳಿಕೆ ಮಾಡಲಾಗಿತ್ತು. ಈಗ ಇವೆರಡರ ಮೇಲೆ ಇರುವ ಸುಂಕ ಅಥವಾ ಪೆಟ್ರೋಲ್-ಡೀಸಲ್ ಮೇಲೆ ನಿಗದಿತ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ.


ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ :


ರಾಜ್ಯದಲ್ಲಿ 2018ರ ಬಳಿಕ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಹೀಗಾಗಿ, ಸದ್ಯದಲ್ಲೇ ಪರಿಷ್ಕರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ, ಜೊತೆಗೆ ಮಾರ್ಗಸೂಚಿ ದರ ಪರಿಷ್ಕರಣೆ ಆಗಲಿದೆ. ಒಟ್ಟಾರೆ 10-15% ದರ ಹೆಚ್ಚಳ ಆಗಲಿದೆ ಎಂದು ಮೂಲಗಳು ತಿಳಿಸಿವೆ.


ಅಬಕಾರಿ: ಎಣ್ಣೆ ದುಬಾರಿ!


ಈಗಾಗಲೇ ಅಬಕಾರಿ ಇಲಾಖೆ ಬಿಯರ್ ಮೇಲೆ 17% ಸುಂಕ ಹೆಚ್ಚಳ ಪ್ರಸ್ತಾವನೆ ಇಟ್ಟಿದ್ದು, IMFL ಮೇಲೆ 20% ಹಾಗೂ ವಿದೇಶಿ ಮದ್ಯ ಮೇಲೆ 25% ಹೆಚ್ಚಳ ಮಾಡಲು ಸಲಹೆ ನೀಡಿದ್ದಾರೆ. ಈ ಮೂಲಕ ವಾರ್ಷಿಕವಾಗಿ ₹40,000 ಕೋಟಿ ಸಂಗ್ರಹ ಮಾಡಬಹುದು ಎಂದು ಅಂದಾಜಿಸಿದ್ದಾರೆ.


ವಿದ್ಯುತ್ ಶಾಕ್: ಕರೆಂಟ್ ಬಿಲ್ ಹೆಚ್ಚಳ


ಈಗಾಗಲೇ  ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ ಸಿ) ವಿದ್ಯುತ್ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್ ಗೆ 70 ಪೈಸೆಯಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದಕ್ಕೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: ಅಕ್ಕಿ ವಿತರಣೆಯಲ್ಲಿ ರಾಜಕೀಯ ಬೇಡ: ಕೇಂದ್ರ ಗೃಹ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ


ಒಟ್ಟಾರೆ ಈ ಬಾರಿಯ ಬಜೆಟ್ ಕೆಲ ಬೆಲೆ ಏರಿಕೆ ಜೊತೆ ಬರಲಿದೆ, ಜನಸಾಮಾನ್ಯರು ಇದನ್ನ ಯಾವ ರೀತಿ ಸ್ವೀಕಾರ ಮಾಡಲಿದ್ದಾರೆ? ಪಂಚ ಗ್ಯಾರೆಂಟಿ ಅನುಷ್ಠಾನಕ್ಕೆ ಇದು ಸರಿ ಎನ್ನುತ್ತಾರ? ಅಥವಾ ಬೆಲೆ ಏರಿಕೆ ಜೊತೆ ಗಾಯದ ಮೇಲೆ ಬರೆ ಎಂದು ಕಿಡಿಕಾರುತ್ತಾರ ಕಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ