ವೃದ್ದರೊಬ್ಬರಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ! ವಿಡಿಯೋ ವೈರಲ್
Congress candidate: ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಬ್ಬರದ ಪ್ರಚಾರಕ್ಕಾಗಿ ಅಭ್ಯರ್ಥಿಗಳು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಾರೆ.. ಹೀಗೆ ಮಧ್ಯಪ್ರದೇಶದ ರತ್ಲಾಮ್ನ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವೃದ್ಧರೊಬ್ಬರಿಂದ ಚಪ್ಪಲಿ ಏಟು ತಿಂದಿರುವ ವೀಡಿಯೋ ಸದ್ಯ ಭಾರೀ ವೈರಲ್ ಆಗಿದೆ..
ಮಧ್ಯಪ್ರದೇಶ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರತ್ಲಾಮ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಪರಸ್ ಸಕ್ಲೇಚಾ ತಮ್ಮ ಗೆಲುವಿಗಾಗಿ ಬಾಬಾ ಅವರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾರೆ.
ಚುನಾವಣಾ ಅಭ್ಯರ್ಥಿ ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಹೊಡೆಸಿಕೊಂಡಿದ್ದು.. ಚಪ್ಪಲಿ ಏಟು ನೀಡಿದ ವೃದ್ಧನನ್ನು ಸ್ಥಳೀಯರು ಪವಾಡಪುರುಷ ಎಂದು ನಂಬಿದ್ದಾರೆ. ಹೀಗಾಗಿ ಅವರಿಂದ ಕಪಾಳಮೋಕ್ಷ ಮಾಡಿಕೊಂಡರೆ ಚುನಾವಣೆಯಲ್ಲಿ ಯಶಸ್ಸು ಗಳಿಸಬಹುದು ಎಂಬ ಲೆಕ್ಕಾಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಚಪ್ಪಲಿಯಿಂದ ಹೊಡೆಸಿಕೊಂಡಿದ್ದಾರೆ.
ಬಸ್ ನಲ್ಲಿ ಸಿಕ್ಕ ಬಂಗಾರವನ್ನು ಠಾಣೆಗೆ ಒಪ್ಪಿಸಿದ ಬಂಗಾರದ ಮನುಷ್ಯ
ಶುಕ್ರವಾರ ಮಧ್ಯಪ್ರದೇಶ ವಿಧಾನಸಭೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ.. ಶುಕ್ರವಾರ ಬೆಳಗ್ಗೆ ರಸ್ತೆಬದಿಯಲ್ಲಿದ್ದ ಫಕೀರ್ ಬಾಬಾ ಹತ್ತಿರ ಹೋಗಿ ಚಪ್ಪಲಿಯಿಂದ ಹೊಡೆಸಿಕೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ..
ಬಾಬಾರನ್ನು ಭೇಟಿ ಮಾಡಿ ಆಶಿರ್ವಾದ ಪಡೆದ ನಂತರ, ಪಾರಸ್ ಸಕ್ಲೇಚಾ ಅವರು ಹೊಸ ಚಪ್ಪಲಿಗಳನ್ನು ಅವರಿಗೆ ಅರ್ಪಿಸಿದರು. ಬಳಿಕ ಫಕೀರ ಬಾಬಾ ಅವರನ್ನು ಕರೆದುಕೊಂಡು ಹೋಗಿ ಪಾರಸ್ ನೆತ್ತಿಗೆ ಬಡೆದರು... ಮುಂದೆ ತಮ್ಮ ಎರಡೂ ಕೆನ್ನೆಗಳನ್ನು ಚಪ್ಪಲಿಯಿಂದ ಮುಟ್ಟುವಂತೆ ಅಭ್ಯರ್ಥಿ ಕೇಳಿಕೊಂಡು ಹೊಡೆಸಿಕೊಂಡಿದ್ದಾರೆ.. ಸದ್ಯ ಬಾಬಾ ಅವರ ಹೊಡೆತಕ್ಕೆ ಮತಗಳು ಸಿಗುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.. ಆದರೆ ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ-ವಿಶ್ವಕಪ್ ಫೈನಲ್ ಪಂದ್ಯಾವಳಿ; ಎಲ್.ಇ.ಡಿ ಪರದೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ಉಚಿತ ಪ್ರವೇಶ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.