ಬೆಂಗಳೂರು: 2018ರ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೇಸ್ ಕಸರತ್ತು ನಡೆಸುತ್ತಿದ್ದು, ಮಂಡ್ಯದಲ್ಲಿ ಪ್ರೊಫೆಸರ್ ಕೃಷ್ಣೆಗೌಡರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 


COMMERCIAL BREAK
SCROLL TO CONTINUE READING

ಪ್ರೊ. ಕೃಷ್ಣೇಗೌಡ ಕಾಮಿಡಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದು, ಹಾಸ್ಯ ಕಲಾವಿದರಾಗಿ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ. ಈಗ ಇವರನ್ನು ಪಾಂಡವಪುರದಿಂದ ಕಾಂಗ್ರೆಸ್ ಆಭ್ಯರ್ಥಿ ಆಗುವಂತೆ ಮನವೊಲಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಜನಪ್ರಿಯತೆಯನ್ನು ಬಳಸಿಕೊಂಡು ಪಾನ್ದವಪುರದಲ್ಲಿ ಗೆಲುವಿನ ದಡ ಸೇರುವುದು ಮುಖ್ಯಮಂತ್ರಿಯವರ ಯೋಜನೆಯಾಗಿದೆ. 


ಮೂಲತಹ ಪಾಂಡವಪುರ ತಾಲ್ಲೂಕಿನ ಕನಕನಮರಡಿ ಗ್ರಾಮದವರಾದ ಕೃಷ್ಣೆಗೌಡರ ಜೊತೆ ಈಗಾಗಲೇ  ಎರಡು ಸುತ್ತಿನ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿ ಪಾಂಡವಪುರ ಕ್ಷೇತ್ರದಿಂದ ಕೃಷ್ಣೆಗೌಡರನ್ನು ಕಣಕ್ಕಿಳಿಸಿ ಗೆಲುವಿನ ಕನಸಿಗೆ ಮುಂದಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಅಂಬರೀಶ್ ಆಪ್ತ ಎಲ್.ಡಿ.ರವಿ  ಸ್ಪರ್ದಿಸಿ 3 ನೇ ಸ್ಥಾನ ಪಡೆದಿದ್ದರು.


ಸಿಎಂ ಆಫರ್ ಗೆ ಆಯ್ತು ಸಾರ್ ನೋಡೋಣ ಎಂದು ಪ್ರೊ. ಕೃಷ್ಣೆಗೌಡ ಪ್ರತಿಕ್ರಿಯಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ಆದರೆ, ಪುಟ್ಟಣ್ಣಯ್ಯ ಹಾಗೂ ಪುಟ್ಟರಾಜು ಮುಂದೆ ಪ್ರಬಲ ಅಭ್ಯರ್ಥಿಯಾಗಿ ಕಾಂಗ್ರೆಸ್ ಗೆ ಗೆಲುವು ತಂದು ಕೊಡ್ತಾರಾ ಪ್ರೊಫೆಸರ್  ಎನ್ನುವುದೇ ಸದ್ಯದ ಕುತೂಹಲವಾಗಿದೆ.