ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ರಾಜ್ಯದಲ್ಲಿ ಹಲ್ಚಲ್ ಸೃಷ್ಟಿಸಿರುವ ಸಂದರ್ಭದಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ.


COMMERCIAL BREAK
SCROLL TO CONTINUE READING

ಸಿಡಿ ಪ್ರಕರಣದಲ್ಲಿ ಭಾರೀ ಮೊತ್ತದ ಹಣದ ವಹಿವಾಟು ನಡೆದಿದೆ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ(Ramesh Jarkiholi) ಅವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ.


Siddaramaiah : ನಾಳೆ MLA, MP, ಗಳಿಗೆ 'ಡಿನ್ನರ್ ಪಾರ್ಟಿ' ಆಯೋಜಿಸಿದ ಸಿದ್ದರಾಮಯ್ಯ!


ಎಸ್‌ಐಟಿ ಪ್ರಕರಣದ ತನಿಖೆ ಮುಂದುವರೆಸಿದೆ. ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದೆ. ಇಂದು ಬೆಂಗಳೂರು ಸೆಂಟ್ರಲ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಜಾರಿ ನಿರ್ದೇಶನಾಲಯ(Enforcement Directorate)ಕ್ಕೆ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.


HD Kumaraswamy,:'ಕೊರೋನಾ ಲಸಿಕೆ'ಯ ಮೊದಲ ಡೋಸ್ ಪಡೆದ ಹೆಚ್ ಡಿಕೆ


ಸಿಡಿ ಪ್ರಕರಣ(CD Case)ದಲ್ಲಿ ನನ್ನನ್ನು ಸಿಲುಕಿಸಲು ಸುಮಾರು 5 ರಿಂದ 20 ಕೋಟಿ ರೂಪಾಯಿ, 100 ಕೋಟಿ ರೂಪಾಯಿವರೆಗೂ ಹಣದ ವಹಿವಾಟು ನಡೆದಿದೆ. ಯುವತಿಗೆ ಎರಡು ಫ್ಲಾಟ್ ಕೊಡಿಸಲಾಗಿದೆ. ಭಾರಿ ಮೊತ್ತದ ಹಣ ನೀಡಲಾಗಿದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದರೆನ್ನಲಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದೂರು ನೀಡಲಾಗಿದೆ.


Corona Second Wave: ಜಾತ್ರೆ, ಉತ್ಸವಗಳಿಗೆ ಬೀಳಲಿದೆಯೇ ಬ್ರೇಕ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.