ಪಕ್ಷ ಬಲಪಡಿಸಲು `ಕ್ರೌಡ್ ಫಂಡಿಂಗ್` ಗೆ ಮೊರೆಹೋದ ಕಾಂಗ್ರೆಸ್
ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಈಗ ಹಣಕಾಸಿನ ಸಮಸ್ಯೆ ಎದುರಾಗಿದೆ ಈ ಕುರಿತಾಗಿ ಟ್ವೀಟ್ ಮಾಡಿರುವ ಶಶಿ ತರೂರ್ ಇದರ ಕೊರತೆಯನ್ನು ನೀಗಿಸಿಲು ಕಾಂಗ್ರೆಸ್ ಪಕ್ಷವು ಕ್ರೌಡ್ ಫಂಡಿಂಗ್ ಗೆ ಮೊರೆ ಹೋಗಿದೆ ಎನ್ನಲಾಗಿದೆ.
ಈ ಕುರಿತಾಗಿ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ " ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಹಾಯದ ಅವಶ್ಯಕತೆಯಿದ್ದು ಆದ್ದರಿಂದ ಕಳೆದ 70 ವರ್ಷಗಳಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಅನುಸರಿಸಿಕೊಂಡು ಬಂದಿದೆ.ಆದ್ದರಿಂದ ಅದನ್ನು ಮತ್ತೆ ಮರುಕಳಿಸಲು ಸಣ್ಣ ರೀತಿಯ ಸಹಾಯ ಮಾಡಿ ಎಂದು ಅದು ತನ್ನ ಟ್ವೀಟ್ ನಲ್ಲಿ ತಿಳಿಸಿದೆ.
ಮುಂಬರುವ ರಾಜಸ್ತಾನ್,ಚತ್ತೀಸ್ ಘಡ್,ಮಧ್ಯಪ್ರದೇಶ, ಹಾಗೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಇದ್ದು ಈ ಹಿನ್ನಲೆಯಲ್ಲಿ ಬಿಜೆಪಿಯನ್ನು ಎದುರಿಸುವ ಅನಿವಾರ್ಯತೆ ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸಾರ್ವಜನಿಕರಿಂದ ದೇಣಿಗೆ ಮೂಲಕ ಸಂಘಟನೆ ಬಲಪಡಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇತ್ತೀಚಿಗೆ ಎಡಿಆರ್ ವರದಿಯಲ್ಲಿ ಬಿಜೆಪಿ ಪಕ್ಷವು 1,034 ಕೋಟಿ ಆದಾಯವನ್ನು ಘೋಷಿಸುವ ಮೂಲಕ ಅತಿ ಶ್ರೀಮಂತ ರಾಜಕೀಯ ಪಕ್ಷ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.