ಹೊಳಲ್ಕೆರೆ : ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಟೀಕಿಸಿದ್ದಾರೆ.


COMMERCIAL BREAK
SCROLL TO CONTINUE READING

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸುವುದಾಗಿ ಪ್ರತಿಜ್ಞೆ ಮಾಡಿದರು. 


ಯುಪಿಎ ಸರ್ಕಾರದಡಿಯಲ್ಲಿ 13ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ 88,583 ಕೋಟಿ ರೂ.ಗಳ ಅನುದ್ದನ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 14ನೇ ಹಣಕಾಸು ಆಯೋಗ ರಾಜ್ಯದ ಅಭಿವೃದ್ಧಿಗಾಗಿ 2,19,000 ಕೋಟಿ ರೂ.ಗಳ ಅನುದಾನ ನೀಡಿದೆ. ಆದರೆ ಈ ಹಣವನ್ನು ರಾಜ್ಯ ಸರ್ಕಾರ ಏನು ಮಾಡಿತು? ಎಂದು ಅಮಿತ್ ಷಾ ಪ್ರಶ್ನಿಸಿದರು. 


ಕೆಳೆದ 5 ವರ್ಷಗಳ ಹಿಂದೆ ಗುಡಿಸಿಲಿನಂತಿದ್ದ ನಿಮ್ಮ ಹಳ್ಳಿಯ ಕಾಂಗ್ರೆಸ್ ನಾಯಕನ ಮನೆ, ಕಳೆದ ಇದು ನಾಲ್ಕು ಅಂತಸ್ತಿನ ಬೃಹತ್ ಮನೆಯಾಗಿದ್ದು, ಮನೆಯ ಮುಂದೆ ಐಶಾರಾಮಿ ಕಾರನ್ನು ಕೂಡಾ ಕಾಣಬಹುದು ಎಂದು ಅಮಿತ್ ಷಾ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ವಾಗ್ದಾಳಿ ನಡೆಸಿದರು. 


ರಾಜ್ಯದ ಕಾಂಗ್ರೆಸ್ ಸರ್ಕಾರವು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದು, ಹಿಂದೂ ವಿರೋಧಿ ಸರ್ಕಾರವಾಗಿದೆ. ಹೀಗಾಗಿ ಭಾರತ ವಿರೋಧಿ ಸಂಸ್ಥೆಯಾದ ಎಸ್ಡಿಪಿಐ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅವರು ಆರೋಪಿಸಿದರು.