ಬೆಂಗಳೂರು : ಗೃಹ ಸಚಿವ ಡಾ ಜಿ ಪರಮೇಶ್ವರ್ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಸಚಿವರು ಮತ್ತು ಶಾಸಕರಿಗೆ ಔತಣಕೂಟ ಆಯೋಜನೆ ಮಾಡದಂತೆ ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಬೆಳವಣಿಗೆಯ ಬೆನ್ನಲ್ಲೇ, ಈ ಸಮುದಾಯದ ನಾಯಕರು ಮತ್ತು ಕಾಂಗ್ರೆಸ್ ಪಕ್ಷದೊಳಗಿನ ವಿರೋಧ ಬಣ ಅಲರ್ಟ್ ಆಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರು ತಮ್ಮ ಮುಂದಿನ ಚಟುವಟಿಕೆಗಳಿಗೆ ತಯಾರಿ ಆರಂಭಿಸಿದ್ದಾರೆ, ಎನ್ನಲಾಗುತ್ತಿದೆ. 


ಡಿಸಿಎಂ ಶಿವಕುಮಾರ್ ಶಕ್ತಿ ಪ್ರದರ್ಶನಕ್ಕೂ ಬ್ರೇಕ್ :


ಮಂಡ್ಯದಲ್ಲಿ ಸಂಕ್ರಾಂತಿ ಸಂದರ್ಭವನ್ನು ನಿಮಿತ್ತವಾಗಿಸಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸುತ್ತಿದ್ದಾರೆ. ಈ ಶ್ರದ್ಧಾಂಜಲಿ ಸಭೆಯ ಮೂಲಕ ಸಮುದಾಯದ ಬಲ ಪ್ರದರ್ಶನ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯೂ ನಡೆಸಲಾಗಿದೆ. ಆದರೆ ಹೈಕಮಾಂಡ್,  ಶ್ರದ್ಧಾಂಜಲಿ ಸಭೆಗೂ ಬ್ರೇಕ್ ಹಾಕುವ ನಿರ್ಧಾರಕ್ಕೆ ಬಂದಿದೆ.


ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ: ಸಿಎಂ ಮತ್ತು ಡಿಸಿಎಂ "ಬಿನ್ನಾ"ಅಭಿಪ್ರಾಯ


ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕಾರಣ, ಅವರ ಹೆಸರಿನಲ್ಲಿ ಕಾಂಗ್ರೆಸ್ ಭಿನ್ನತೆಯನ್ನು ತೋರಿಸುವ ಶ್ರದ್ಧಾಂಜಲಿ ಸಭೆ ಬೇಡ ಎಂಬುದು ನಾಯಕರ ಅಭಿಪ್ರಾಯ ಆಗಿದೆ.


ಯಾವುದೇ ಕಾರಣಕ್ಕೂ, ಈ ರೀತಿಯ ಸಭೆ‌ ರಾಜಕೀಯ ಪಿತೂರಿಯನ್ನು ಉಂಟುಮಾಡಬಾರದು ಎಂಬುದಾಗಿ ಹೈಕಮಾಂಡ್ ಅಭಿಪ್ರಾಯಪಟ್ಟಿದೆ.ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಟಕಕ್ಕೂ, ಭಿನ್ನತೆಯೂ ಅವಕಾಶ ಮಾಡಿಕೊಡಬಹುದು.


ಇದನ್ನೂ ಓದಿ: ಔತಣಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿ.ಕೆ. ಸುರೇಶ್


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.