ಕಾಂಗ್ರೆಸ್ ಒಳಗೆ ಸಿದ್ದರಾಮಯ್ಯ ವಿರುದ್ದ ಏನೆಲ್ಲಾ ನಡೆಯಬಹುದು?
ಉಪ ಚುನಾವಣೆಗೆ ಹುರಿಯಾಳುಗಳನ್ನು ಅಂತಿಮಗೊಳಿಸಲೆಂದು ಕರೆಯಲಾಗಿದ್ದ ಚುನಾವಣಾ ಸಮತಿ ಸಭೆಯಲ್ಲಿ ಹಿರಿಯ ನಾಯಕರೇ ಜಗಳ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮಂದೇನಾಗಬಹುದು...
ಬೆಂಗಳೂರು: ಉಪ ಚುನಾವಣೆಗೆ ಹುರಿಯಾಳುಗಳನ್ನು ಅಂತಿಮಗೊಳಿಸಲೆಂದು ಕರೆಯಲಾಗಿದ್ದ ಚುನಾವಣಾ ಸಮತಿ ಸಭೆಯಲ್ಲಿ ಹಿರಿಯ ನಾಯಕರೇ ಜಗಳ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮಂದೇನಾಗಬಹುದು? ಬಹಳ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಸದ್ಯದ ಒನ್ ಅಂಡ್ ಓನ್ಲಿ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ವಿರೋಧಿಗಳೆಲ್ಲ ಒಟ್ಟುಗೂಡಿ ಸೆದೆಬಡೆಯುವ ಕೆಲಸ ಆಗಬಹುದು. ಸಾಧ್ಯತೆಗಳು ಹೀಗಿವೆ...
* ಈಗಾಗಲೇ ಬೇರೆ ಬೇರೆ ಕಾರಣಗಳಿಗೆ ಸಿದ್ದರಾಮಯ್ಯ ವಿರುದ್ದ ಆಕ್ರೋಶಗೊಂಡಿರುವವರು ಒಗ್ಗಟ್ಟಾಗಬಹುದು.
* ಕಳೆದ ವಾರ ಸಿದ್ದರಾಮಯ್ಯ ವಿರುದ್ಧ ದೆಹಲಿಯಲ್ಲಿ ಸಭೆ ನಡೆಸಿದ್ದ ನಾಯಕರು ಇನ್ನೂ ಉತ್ಸಾಹದಲ್ಲಿ ಮುಂದಡಿ ಇಡಬಹುದು.
* ಅಟ್ ಎನಿ ಕಾಸ್ಟ್ ಸಿದ್ದರಾಮಯ್ಯ ಅವರ ಪ್ರಭಾವವನ್ನು ಕಡಿಮೆ ಮಾಡಲೆಂದು ಪಣತೊಡಬಹುದು.
* ದೆಹಲಿಗೆ ಹೋಗಿ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಬಹುದು.
* ಹಿಂದಿನದೆಲ್ಲವನ್ನೂ ಸೇರಿಸಿ ಸಿದ್ದರಾಮಯ್ಯ ವಿರುದ್ಧ 'ಚಾರ್ಜ್ ಶೀಟ್' ಸಲ್ಲಿಸಬಹುದು.
* ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸೋಲನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಪ್ರಯತ್ನಿಸಬಹುದು.
* ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುರಿದು ಬಿದ್ದುದಕ್ಕೂ ಸಿದ್ದರಾಮಯ್ಯ ಅವರೇ ಹೊಣೆ ಎಂದು ಆರೋಪ ಮಾಡಬಹುದು.
* ಸಿದ್ದರಾಮಯ್ಯ ಅವರಿಗೆ ಪಕ್ಷದ ಮೇಲಿರುವ ಹಿಡಿತ ತಪ್ಪಿಸಿ ಪಕ್ಷ ಉಳಿಸಿಕೊಳ್ಳಿ ಎಂದು ಜಾಣತನದ ಸಲಹೆ ನೀಡಬಹುದು.
* ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡಲು ಅಧಿಕಾರ ಮೊಟಕುಗೊಳಿಸಿ ಎಂದು ಮನವಿ ಮಾಡಿಕೊಳ್ಳಬಹುದು.
* ಮಹಾರಾಷ್ಟ್ರ ಮಾದರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷದ ನಾಯಕನ ಹುದ್ದೆಗಳನ್ನು ಇಬ್ಬರಿಗೆ ಕೊಡಿ ಎಂದು ಹೇಳಬಹುದು.
* ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸೀಮಿತಗೊಳಿಸಿ ಎಂದು ಲಾಭಿ ಮಾಡಬಹುದು.
* ಸಿದ್ದರಾಮಯ್ಯ ಬೆಂಬಲಿಗ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿಯಿಂದ ಕೆಳಗಿಳಿಸಲು ಲಾಭಿ ಮಾಡಬಹುದು.
* ದಿನೇಶ್ ಗುಂಡೂರಾವ್ ಕೆಳಗಿಳಿಸಿದರೆ ಸಿದ್ದರಾಮಯ್ಯಗೆ ಪಕ್ಷದ ಮೇಲಿನ ಹಿಡಿತ ತನ್ನಿಂದ ತಾನೇ ಕಡಿಮೆಯಾಗುತ್ತದೆಂದು ಈ ಕೆಲಸಕ್ಕೆ ಕೈ ಹಾಕಬಹುದು.
* ಮತ್ತೆ ಸಾಮೂಹಿಕ ನಾಯಕತ್ವದ ಮಂತ್ರವನ್ನು ಪಠಿಸಲು ಆರಂಭಿಸಬಹುದು.