ಬೆಂಗಳೂರು: ಪಠ್ಯಪುಸ್ತಕದಿಂದ ಭಗತ್ ಸಿಂಗ್ ಪಠ್ಯವನ್ನು ಕೈಬಿಟ್ಟ ಕ್ರಮ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ ಎಂಬ ಕಾಂಗ್ರೆಸ್‍ ಅರೋಪಕ್ಕೆ ಬಿಜೆಪಿ ಮಂಗಳವಾರ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

Dear #CongressFakeNewsFactory ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ. ಭಗತ್‌ ಸಿಂಗ್‌ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು. ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು?’ ಎಂದು ಪ್ರಶ್ನಿಸಿದೆ.


ಡಿಕೆಶಿಗೆ ಹುಟ್ಟುಹಬ್ಬದ ಕೇಕ್ ತಿನ್ನಿಸದ ಪ್ರಿಯಾಂಕಾ ಗಾಂಧಿ: ಬಿಜೆಪಿ ವ್ಯಂಗ್ಯ


ಸಿದ್ದು ಅಧಿಕಾರ ವ್ಯಾಮೋಹ!  


‘ರಾಜಕೀಯ ನಿವೃತ್ತಿಯ ಬಗ್ಗೆ ಸಿದ್ದರಾಮಯ್ಯ ಮಾತನಾಡಲಾರಂಭಿಸಿ ಒಂದು ದಶಕವಾಯ್ತು. ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು ಮತ್ತು ಅಲ್ಲಿ ರಾಜಕೀಯ ನಿವೃತ್ತಿ ಘೋಷಣೆಯ ಬೆಳ್ಳಿಹಬ್ಬ ಆಚರಿಸೋಣ ಎಂದು ಆಶಾವಾದ ವ್ಯಕ್ತಪಡಿಸಬೇಕು. ಏಕೆಂದರೆ ನಿಮ್ಮ ಅಧಿಕಾರ ವ್ಯಾಮೋಹ ಅಷ್ಟು ಬಲವಾದದ್ದು!’ ಎಂದು ಟೀಕಿಸಿದೆ.


ಶಾಸಕ ರಾಮಸ್ವಾಮಿಯವರು ನಮ್ಮ ಕುಟುಂಬದ ಅಣ್ಣ ಇದ್ದ ಹಾಗೆ : ಕುಮಾರಸ್ವಾಮಿ


ಸಿದ್ದರಾಮಯ್ಯ ಅವರು ಮತ್ತೊಂದು ರೀತಿಯಲ್ಲಿ ಕುಟುಂಬವಾದ ಬೆಳೆಸಲು ಹೊರಟಿದ್ದಾರೆ. ಯತೀಂದ್ರ ಜನಪ್ರಿಯ ಶಾಸಕ ಎಂದು ಬಿಂಬಿಸುವ ಮೂಲಕ ತಮ್ಮ ಪುತ್ರನನ್ನು ಮುಖ್ಯಮಂತ್ರಿ ರೇಸ್‌ಗೆ ತರುವ ಲೆಕ್ಕಾಚಾರವೇ? ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ಇದು ಮತ್ತೊಂದು ಸವಾಲೋ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.