ಬೆಳಗಾವಿ : ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ಮುಂಬೈಗೆ ತೆರಳಿದ್ದೆ ಎಂದು ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ಆರ್ ರಾವ್ ಹೊಸ ಬಾಂಬ್ ಸಿಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ನವ್ಯಶ್ರೀ ಆರ್ ರಾವ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮುಂಬೈಗೆ ಹೋಗಿದ್ದ ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳಲು ನನಗೆ ಸಿಕ್ರೇಟ್ ಟಾಸ್ಕ್ ನೀಡಿದ್ದರು. ಬೇರೆ ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿದ್ದೆವು. ನನ್ನ ಜೊತೆ ಮೂವರು ಮಹಿಳೆಯರು ಬಂದಿದ್ದರು. ನಾಯಕರುಗಳಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ ಕೊಡ್ತಿದ್ದೆ. ಆ ಸಿಕ್ರೇಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು. 


ಇದನ್ನೂ ಓದಿ : BY Vijayendra : ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು : ಬಿವೈ  ವಿಜಯೇಂದ್ರ


ಅತೃಪ್ತ ಶಾಸಕರ‌ ಹನಿಟ್ರ್ಯಾಪ್ ಮಾಡಲು ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನವ್ಯಶ್ರೀ, ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿ ಮಾಹಿತಿ‌ ಕೊಡ್ತಿದ್ದೆ ಅಷ್ಟೇ. ಮುಂಬೈನ ಸುಫಿಯೋಟೆಲ್ ಹೋಟೆಲ್‌ಗೆ ಹೋಗಿದ್ದೆ ಎಂದು ಹೇಳಿದ್ದಾರೆ. 


ನಾನು ಮಧ್ಯಾಹ್ನ ಹೋಗಿ ಎಪಿಎಂಸಿ ಠಾಣೆಗೆ ಪೊಲೀಸರಿಗೆ ದೂರು ನೀಡ್ತೇನೆ. ಹನಿಟ್ರ್ಯಾಪ್ ದೂರು ನೀಡಲು ರಾಜಕುಮಾರ ಟಾಕಳೆ ಸಹಕಾರ ಕೊಟ್ಟಿದ್ದೇನೆ. ಸೆಕ್ಸ್‌ಮೇಟ್ ತರಹ ಬೇಕು ಅನ್ನೋದು ಅವನ ಉದ್ದೇಶವಾಗಿದೆ. ನನನ್ನು ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ಇರಿಸಿದ್ದ. ಅಲ್ಲಿ ಯಾರೂ ಗಂಡಸರು ಬರಲ್ಲ ಅಂತಾ ನನ್ನ ಅಲ್ಲಿ ಇರಿಸಿದ್ದ. ಆ ಆಡಿಯೋ ಕ್ಲಿಪ್‌ನಲ್ಲಿ‌ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದು. ತಿಲಕರಾಜ್ 13 ವರ್ಷದ ನನ್ನ ಕುಟುಂಬ ಸ್ನೇಹಿತನಾಗಿದ್ದಾನೆ. ರಾಜಕುಮಾರ ಟಾಕಳೆ ಗ್ರೂಪ್ ಬಿ ನೌಕರ. 50 ಲಕ್ಷ ಕೊಡಲು ಆಗಲ್ಲ‌ ಅಂತಾ ಗೊತ್ತಿದೆ. ನಾನು ಆತನ ಬಳಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಈತ ನನ್ನ ಜೊತೆಗೆ ಇದ್ದ ವಿಡಿಯೋಗಳನ್ನು ವೈರಲ್ ಮಾಡಿದ್ದಾನೆ. 


ಚನ್ನಪಟ್ಟಣ ಮಹಾನಾಯಕ ಮುಂದಿನ ಕಾಂಗ್ರೆಸ್‌ ಅಭ್ಯರ್ಥಿ ಆಗಿರುವನು ಈತನ ದಾಳ ಆಗಿಸಿಕೊಂಡಿದ್ದಾನೆ. ಚನ್ನಪಟ್ಟಣದ ಕಾಂಗ್ರೆಸ್‌ ಮಹಾನಾಯಕ ತವಕದಲ್ಲಿ ಹೆಣ್ಣು ಮಗಳ ಜೀವನ ಹಾಳು ಮಾಡಿದ್ದಾನೆ. ಆತನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇ‌ನೆ. ನನ್ನ ರಾಜಕೀಯವಾಗಿ ಮುಗಿಸಲು ಆ ಮಹಾನಾಯಕ ಸಾಥ್ ಕೊಟ್ಟಿದ್ದಾನೆ. ಸಹಕಾರ ಕೊಟ್ಟ ಮಹಾನ್ ನಾಯಕ ಯಾರು ಅಂತಾ ಹೇಳ್ತೇನೆ. ಆ ಮಹಾನಾಯಕ್‌ನ ಜೊತೆ ಒಬ್ಬ‌ ಪತ್ರಿಕಾ ಸಂಪಾದಕ ಕೂಡ ಆಗಿದ್ದಾನೆ. ಆ ಪತ್ರಿಕಾ ಸಂಪಾದಕನ ವಿರುದ್ಧವೂ ದೂರು‌ ನೀಡ್ತೇನೆ. ರಾಜಕುಮಾರ ಟಾಕಳೆ ದೊಡ್ಡ ಹೆಣ್ಣು ಬಾಕ. ನವ್ಯಶ್ರೀಗೆ ರಾಜಕಾರಣ ಹೊರತುಪಡಿಸಿ ವೈಯಕ್ತಿಕ ಬದುಕು ಸರಿಪಡಿಸಿಕೊಳ್ಳಬೇಕು. ನಾನು ದೆಹಲಿಮಟ್ಟದ, ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕರ ಜೊತೆ ಸಂಪರ್ಕ ಇರೋದು‌ ನಿಜ. 2023ಕ್ಕೆ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಬೇಕಿಂದಿದ್ದೆ. ಈ ವಿಡಿಯೋ ಬಂದ ವೇಳೆ ನಾನು ದುಬೈನಲ್ಲಿ ಇದ್ದೆ. ಕಾಂಗ್ರೆಸ್‌ ನಿಂದ ನನ್ನ ಸಸ್ಪೆಂಡ್ ಮಾಡುವ ಲೆಟರ್ ಎಲ್ಲಿದೆ. ಬೇಕಾದರೆ ನನ್ನ ಸಸ್ಪೆಂಡ್ ಮಾಡಲಿ. ನಾನು ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿದ್ದೇನೆ, ಯಾವ ಪೋಸ್ಟ್ ಅಂತಾ ಹೇಳಲ್ಲ. ಇದನ್ನು ರಾಜಕೀಯವಾಗಿ ತಿರುಚೋದು‌ ತಪ್ಪು ಎಂದು ಹೇಳಿದ್ದಾರೆ. 


ಇದನ್ನೂ ಓದಿ : Mallikarjun Kharge : 'ಚುನಾವಣೆ ಮುನ್ನೆವೇ ನಾನು ಸಿಎಂ, ನಾನು ಸಿಎಂ ಎನ್ನುವುದು ಸರಿಯಲ್ಲಾ'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.