ತುಮಕೂರು: ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠಕ್ಕೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ(Rahul Gandhi)ಗುರುವಾರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ(Shivakumara Swamiji)ಗದ್ದುಗೆಯ ದರ್ಶನ ಪಡೆದುಕೊಂಡು ನಮಿಸಿದರು. ಹಣೆಗೆ ವಿಭೂತಿ ಹಚ್ಚಿಕೊಂಡ ಅವರು ಬಳಿಕ ಶ್ರೀಗಳ ಧ್ಯಾನ ಮಂದಿರಕ್ಕೆ ಹೋಗಿ ಕೆಲ ಕಾಲ ಧ್ಯಾನ ಮಾಡಿದರು.


COMMERCIAL BREAK
SCROLL TO CONTINUE READING

ಇದೇ ವೇಳೆ ಮಠದ ಮಕ್ಕಳನ್ನುದ್ದೇಶಿಸಿ ರಾಹುಲ್ ಗಾಂಧಿ(Rahul Gandhi) ಭಾಷಣ ಮಾಡಿದರು. ದೇಶದಲ್ಲಿ ಈಗ ಕೋಮುದ್ವೇಷ ಹೆಚ್ಚುತ್ತಿದ್ದು, ಸಾಮರಸ್ಯ ಸಾರುವುದು ಅಗತ್ಯವಿದೆ. ವಿಶ್ವಗುರು ಬಸವಣ್ಣನವರು ಹೇಳಿದಂತೆ ಯಾವುದೇ ಜಾತಿ-ಧರ್ಮ, ದ್ವೇಷ-ಅಸೂಯೆ ಇಲ್ಲದಂತೆ ನಾವು ಬದುಕಬೇಕೆಂಬುದು ಮಂತ್ರವಾಗಬೇಕು. ಇಲ್ಲಿ ಬೋಧಿಸುವ ಭ್ರಾತೃತ್ವ ದೇಶಕ್ಕೆ ಬೇಕಾಗಿದೆ. ದೇಶದಲ್ಲಿ ಹರಡುತ್ತಿರುವ ದ್ವೇಷ ಕಡಿಮೆಯಾಗಬೇಕಿದೆ. ಈ ಭಾತೃತ್ವ ಹರಡುತ್ತಿರುವ ಸ್ವಾಮೀಜಿ ಹಾಗೂ ಮಠದವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.  


ಇದನ್ನೂ ಓದಿ: Sriram Sene : 'ಮುಸಲ್ಮಾನರಿಂದ ಹಿಂದೂ ಧರ್ಮಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರವಾಗುತ್ತಿದೆ'


ಮಠದೊಂದಿಗೆ ಇದು ನನ್ನ ಹೊಸ ಸಂಬಂಧವಲ್ಲ, ನಾನು ಮಠ(Tumakuru Siddaganga Mutt)ದ ಜೊತೆಗೆಯೇ ಇರುತ್ತೇನೆ. ಈ ಸಂದರ್ಭದಲ್ಲಿ ನಾನು ಶಿವಕುಮಾರ ಸ್ವಾಮೀಜಿ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಅವರು ತುಂಬಾ ವರ್ಷಗಳ‌ ಕಾಲ ನಮಗೆ ಮಾರ್ಗದರ್ಶನ ನೀಡಿದರು. ಈ ಹಿಂದೆ ಡಾ.ಶಿವಕುಮಾರ ಸ್ವಾಮೀಜಿ(Shivakumara Swamiji) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದೆ. ಅವರು ಇಂದು ಇಲ್ಲದಿರುವುದು ನೋವುಂಟು ಮಾಡಿದೆ. ಆದರೆ ಸ್ವಾಮೀಜಿಯವರ ಮಾರ್ಗದರ್ಶನ ನಮ್ಮೊಂದಿಗಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಯುವಕರು, ಜನರು ನಡೆಯಬೇಕಾಗಿದೆ. ಇಂದು ನಾನು ಇಲ್ಲಿಗೆ ಬಂದಿರುವುದು ಬಹಳಷ್ಟು ಖುಷಿ ತಂದಿದೆ. ಸ್ವಾಮೀಜಿಯವರ ದರ್ಶನವಾಗಿರುವುದು, ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿರುವುದು ನನಗೆ ಬಹಳ ಖುಷಿ ತಂದಿದೆ ಎಂದು ಹೇಳಿದರು.


Siddaganga Mutt)ದಲ್ಲಿ ನಡೆಯುತ್ತಿರುವ ಸೇವೆ ಸಂತೋಷ ತಂದಿದೆ. ಸಾವಿರಾರು ಮಕ್ಕಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು. ರಾಹುಲ್ ಅವರು ಸಂಜೆ ಮಠದ ಮಕ್ಕಳ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.


ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ ; ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ದೂರು ದಾಖಲು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.