ವಾಲ್ಮೀಕಿ ಸಮುದಾಯಕ್ಕೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪ್ರಬಲ ಒತ್ತಾಯ; ಸಚಿವರ ಪಟ್ಟು?!
ಇತ್ತೀಚೆಗೆ ವರಿಷ್ಠರನ್ನು ಭೇಟಿಯಾಗಿರುವ ಸಚಿವ ಕೆ.ಎನ್. ರಾಜಣ್ಣ, ಸಮುದಾಯದ ಮಹತ್ವವನ್ನು ನೆನಪಿಸಿ, ಈ ಬಾರಿಯಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ನಾಯಕರಿಗೆ ಈವರೆಗೂ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ವಿಚಾರ. ಈ ಹಿನ್ನೆಲೆಯಲ್ಲೇ ಈ ಬಾರಿ ವಾಲ್ಮೀಕಿ ಸಮುದಾಯಕ್ಕೆ ಈ ಸ್ಥಾನ ನೀಡಬೇಕು ಎಂಬ ಒತ್ತಾಯ ಪ್ರಬಲವಾಗಿದೆ.
ಸಚಿವರ ಬಿಗಿ ಪಟ್ಟು: ಡೆಲ್ಲಿ ಭೇಟಿ! : ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ, ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾಗಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಈ ವಿಷಯವನ್ನು ಮಂಡನೆ ಮಾಡಿದ್ದಾರೆ. ಇತ್ತೀಚೆಗೆ ವರಿಷ್ಠರನ್ನು ಭೇಟಿಯಾಗಿರುವ ಸಚಿವ ಕೆ.ಎನ್. ರಾಜಣ್ಣ, ಸಮುದಾಯದ ಮಹತ್ವವನ್ನು ನೆನಪಿಸಿ, ಈ ಬಾರಿಯಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ, ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಧನುಷ್- ಐಶ್ವರ್ಯ ಅಭಿಮಾನಿಗಳಿಗೆ ಆಘಾತ..! ಜೋಡಿಗೆ ವಿಚ್ಚೇದನ ನೀಡಿ ತೀರ್ಪು ಘೋಷಿಸಿದ ಕೋರ್ಟ್
ಅಹಿಂದ ಮತಗಳ ಕ್ರೋಡೀಕರಣ: ವಾಲ್ಮೀಕಿ ಸಮುದಾಯವನ್ನು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಪ್ರಭಾವಿ ಸಮುದಾಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಮುಖ ಮುಖಂಡರಾಗಿದ್ದು, ಈ ಬಾರಿಯೂ ಅಹಿಂದ ಮತಗಳನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯುವ ದೃಷ್ಟಿಯಿಂದ ವಾಲ್ಮೀಕಿ ಸಮುದಾಯಕ್ಕೆ ಈ ಸ್ಥಾನ ನೀಡುವುದು ಉತ್ತಮ ತೀರ್ಮಾನವೆಂದು ಅಹಿಂದ ನಾಯಕರ ಅಭಿಪ್ರಾಯವಾಗಿದೆ.
ಮತದಾಳದ ಪ್ರಭಾವ: ವಾಲ್ಮೀಕಿ ಸಮುದಾಯ ರಾಜ್ಯದ 80 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದರಿಂದ ಅಹಿಂದ ಮತಗಳ ಏಕೀಕರಣಕ್ಕೆ ನೆರವಾಗುತ್ತದೆ. ವಿಶೇಷವಾಗಿ, ಸಚಿವ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಇತರ ಸಮುದಾಯಗಳನ್ನೂ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ,ಈ ಎಲ್ಲ ಕಾರಣಗಳಿಂದ, ಹೈಕಮಾಂಡ್ ಈ ಬಾರಿಯಾದರೂ ವಾಲ್ಮೀಕಿ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಪ್ರಬಲವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.