Priyank kharge : `ನಮಗೆ ಬಿಜೆಪಿಯವರಿಂದಲೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಬರ್ತಿದೆ`
ನಮಗೆ ಬಿಜೆಪಿ ಅವರಿಂದಲೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಬರ್ತಿದೆ
ಕಲಬುರಗಿ : ನಮಗೆ ಬಿಜೆಪಿ ಅವರಿಂದಲೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಬರ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರೀಯಾಂಕ ಖರ್ಗೆಯವರು ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಪ್ರೀಯಾಂಕ ಖರ್ಗೆ, ಬಿಜೆಪಿಯ ಸುರೇಶ್ ಗೌಡ ಅವರೇ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಮಂತ್ರಿಮಂಡಲದ ಮೇಲೆ ಸಿಎಂ ಗೆ ಹಿಡಿತವಿಲ್ಲ. ನಳೀನ್ ಕಟೀಲ್ ಗೆ ಬಿಜೆಪಿ ಅವರ ಮೇಲೆ ಹಿಡಿತ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಅವರೇ ಬೆಂಕಿ ಹಚ್ಚುತ್ತಿದ್ದಾರೆ. ನಾವು ಬೆಂಕಿ ಹತ್ತಿದೆ ಅಂತಾ ಹೇಳಿದ್ರೆ ನಮ್ಮ ಮೇಲೆ ಗೂಬೆ ಕೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲೋಕಾಯುಕ್ತಕ್ಕೆ ಕೋರ್ಟ್ ತೀರ್ಪಿನಿಂದ ಆನೆ ಬಲ: ಆಪ್ ಸಂಭ್ರಮಾಚರಣೆ
ಬಿಜೆಪಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ ಖರ್ಗೆ, ಇದು ಲಂಚ ಮಂಚದ ಸರ್ಕಾರ, ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕಂದ್ರೆ ಮಂಚ ಹತ್ತಬೇಕು. ಸರ್ಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೋತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಪ್ರತಿಯೊಂದು ಹುದ್ದೆಗಳು ಮಾರಾಟಕ್ಕಿವೆ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.