ಬೆಂಗಳೂರು: ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ (Mekedatu Padayatre) ಹಿಂದೆ ಪಡೆಯುತ್ತಿದ್ದೇವೆ ಎಂದು ವಿಧಾನಸಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಒತ್ತಾಯ ಮಾಡಿ ಪಾದಯಾತ್ರೆ ಮಾಡ್ತಾ ಇದ್ದೇವೆ. ನಾಲ್ಕು ದಿನಗಳ ಕಾಲ ಡಿಕೆಶಿ, ನಾನು ಶಾಸಕರು, ಸಂಸದರು ಪಾದಯಾತ್ರೆ ಮಾಡಿದ್ದೇವೆ. ಕಾರ್ಯಕರ್ತರು ಕೂಡ ಭಾಗವಸಿದ್ದರು. ನಾವು ಎರಡು ತಿಂಗಳ ಹಿಂದೆ ಪಾದಯಾತ್ರೆ ತೀರ್ಮಾನ ಮಾಡಿದ್ವಿ ಎಂದರು.


ಬೆಳಗಾವಿಯಲ್ಲಿ ಅಧಿವೇಶನ ಕೂಡ ಕರೆದಿದ್ದರು. ಜ.9 ರಿಂದ ನಾವು ಪಾದಯಾತ್ರೆ (Congress Padayatre) ಆರಂಭ ಆಯ್ತು. ರಾಮನಗರದವರೆಗೆ ಮುಖಂಡರು, ಕಾರ್ಯಕರ್ತರು ಯಶಸ್ವಿಯಾಗಿ ಪಾದಯಾತ್ರೆ ಮಾಡಿದ್ದೇವೆ. ಇವತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಮಾಡಬೇಕಿತ್ತು. ನಿನ್ನೆ ಹದಿನೈದು ಸಾವಿರ ಜನರಿಗೆ ಕೊರೊನಾ (Corona) ಸೋಂಕು ತಗುಲಿದೆ ಎಂದು ಹೇಳಿದರು. 


ಇದನ್ನೂ ಓದಿ: Basavaraj Bommai : ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಮನವಿ!


ನಮ್ಮದು ಹಳೆಯ ರಾಜಕೀಯ ಪಕ್ಷ. ಬಹಳ ದಿನಗಳ ಕಾಲ ಅಧಿಕಾರ ಮಾಡಿದ ಪಕ್ಷ. ಜವಾಬ್ದಾರಿ ನಮಗೂ ಇದೆ. ಅದನ್ನು ನಿರ್ವಹಣೆ ಮಾಡಬೇಕಿದೆ. ಇವತ್ತು ಕೊರೊನಾ ಹರಿಡಿದ್ರೆ ನೇರವಾಗಿ ಬಿಜೆಪಿ ಸರ್ಕಾರ ಕಾರಣ ಎಂದರು. 


ಸಿಎಂ ಯಾವ ಸಭೆಯನ್ನು ನಿಲ್ಲಿಸಲಿಲ್ಲ. ಪರಿಷತ್ ಸದಸ್ಯರ ಪ್ರಮಾಣ ವಚನ ಸಮಾರಂಭ ಮಾಡಿದ್ರು. ಈಗ ಮೊಸಳೆ ಕಣ್ಣೀರು ಸುರಿಸ್ತಾ ಇದ್ದಾರೆ. ಸುಭಾಷ್ ಗುತ್ತಿಗೆದಾರ ಪ್ರತಿಭಟನೆ ರ್ಯಾಲಿ ಮಾಡಿದ್ರು. ರೇಣುಕಾಚಾರ್ಯ ಜಾತ್ರೆ ಮಾಡಿದ್ರು. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡಿದ್ರು. ಮೂರನೇ ಅಲೆ ಇದ್ರು ಇವರು ಕಾರ್ಯಕ್ರಮ ಮಾಡಿದ್ರು ಎಂದು ಜರಿದರು.


ಆರಗ ಜ್ಞಾನೇಂದ್ರ ಕೂಡ ಕಾರ್ಯಕ್ರಮ ಮಾಡಿದ್ರು. ಒಬ್ಬರ ಮೇಲೆ ಕೂಡ ಕೇಸ್ ಹಾಕಲಿಲ್ಲ. ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್ ಗೆ ಕಳುಹಿಸಿದ್ದಾರೆ. ಸರ್ಕಾರದ ಉದ್ದೇಶ ಸರಿಯಿಲ್ಲ. ಪಾದಯಾತ್ರೆ ತಡೆಯುವ ಎಲ್ಲ ಪ್ರಯತ್ನ ಮಾಡಿದ್ರು. ನಮಗೆ ಇವತ್ತು ಇನ್ನೊಂದು ನೋಟಿಸ್ ಕೊಟ್ಟಿದ್ದಾರೆ. ನಾವು ಯಾವುದಕ್ಕೆ ಹೆದರಲ್ಲ, ನಮಗೆ ಜನರ ಹಿತ ಮುಖ್ಯ ಎಂದು ಹೇಳಿದರು. 


ರಾಜ್ಯದ ಜನರ ಮೇಲೆ ನಮಗೆ ಕಾಳಜಿ ಇದೆ. ಪಾದಯಾತ್ರೆಯಿಂದ ಕೊರೊನಾ (Covid-19) ಉಲ್ಬಣ ಆಗಬಹುದು ಎಂಬ ಆತಂಕ ಇದೆ. ನಾವು ಕೇಸ್ ಹಾಕಬಹುದು ಎಂಬ ಭಯದಿಂದ ಅಲ್ಲ, ನಮ್ಮ ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಹಿಂದೆ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.


ಬೆಂಗಳೂರು ನಗರಕ್ಕೆ ನಾವು ಪಾದಯಾತ್ರೆ ಮೂಲಕ ಹೋಗುತ್ತಿದ್ದೆವು. ಎರಡು ದಿನದಲ್ಲಿ ಅಲ್ಲಿಗೆ ಹೊಗ್ತಾ ಇದ್ವಿ. ಅಲ್ಲಿ ಬೃಹತ್ ರ್ಯಾಲಿ ಮಾಡ್ತಾ ಇದ್ವಿ. ಅಲ್ಲಿ ಲಕ್ಷಾಂತರ ಜನರು ಸೇರುತ್ತಿದ್ರು. ಜನರ ಮನಸ್ಸಿಗೆ ನೋವಾಗಬಾರದು ಅಂತ. ಇವತ್ತು ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತ ಮಾಡ್ತಾ ಇದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ ಕೊರೊನಾ ದೃಢ, ಹೆಚ್ಚಿದ ಆತಂಕ


ಕೊರೊನಾ ಮುಗಿದ ಮೇಲೆ ಪಾದಯಾತ್ರೆ ಮುದುವರೆಯುತ್ತೆ. ಯಾರು ಉತ್ಸಾಹ ಕಳೆದುಕೊಳ್ಳಬೇಡಿ. ಮತ್ತೆ ಪಾದಯಾತ್ರೆ ಆರಂಭ ಆಗುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.


ವಿಧಿಯಿಲ್ಲ ಇವತ್ತು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ:


ಮೂರು ದಿನ ಮೌನ ಅಂತ ಹೇಳಿದ್ದೆ, ವಿಧಿಯಿಲ್ಲ ಇವತ್ತು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ನಿನ್ನೆ ರಾತ್ರಿ ಮಲಗಿದ್ದೆ, 12.30 ಆಗಿತ್ತು. ನೋಟಿಸ್ ಕೊಡೋಕೆ ಪೊಲೀಸರು ಬಂದರು. ಲೆಟರ್ ಕೊಟ್ಟಿದ್ದಾರೆ ಸರ್ ಅಂದ್ರು, ಯಾರು ಕೊಟ್ಟಿದ್ದಾರೆ ಅಂದೆ. ಡಿಸಿ ಕೊಟ್ಟಿದ್ದಾರೆ ಅಂದ್ರು, ಡಿಸಿಗೆ ಕೊರೊನಾ ಅಲ್ವಾ..? ಮತ್ತೇ ಹೇಗೆ ನೋಟಿಸ್ ಕೊಟ್ರು ಅಂತ ಕೇಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.


ಹೋರಾಟ ನಮ್ಮ ಹಕ್ಕು, ಆದ್ರೆ ಇವತ್ತಿನ ಪರಿಸ್ಥಿತಿ ನೋಡಬೇಕು. ನಾವು ನ್ಯಾಯಾಲಯಕ್ಕೆ ಮನ್ನಣೆ ನೀಡಬೇಕು. ನಮಗೆ ಜನರು ದೇವರು. ರಾಮನಗರದಲ್ಲಿ ಯಾವುದೇ ಕಕೊರೊನಾ ಸಂಖ್ಯೆ ಹೆಚ್ಚಿಲ್ಲ. ಬೇಕಾದ್ರೆ ಆಸ್ಪತ್ರೆ ಚೆಕ್ ಮಾಡಿ ನೋಡಿ ಎಂದರು.


ಸಿಎಸ್ ಒಂದು ನೋಟಿಸ್, ಡಿಸಿ ಒಂದು ನೋಟಿಸ್. ಜನರು ಬರದಂತೆ ತಡೆದಿದ್ದಾರೆ. ಆದ್ರೆ ಇಬ್ಬರೆ ನಡೆಯಬೇಕು ಅಂತ ತೀರ್ಮಾನ ಮಾಡಿದ್ವಿ. ಜನರ ಮೇಲೆ ಬದ್ಧತೆಯಿಂದ ಹೋರಾಟ ಕೈ ಬಿಟ್ಟಿದ್ದೇವೆ ಎಂದು ಹೇಳಿದರು. 


ನಾವು ಯಾವುದೇ ಕೇಸ್ಗೆ ಹೆದರಲ್ಲ. ಆದ್ರೆ ಜನರ ದೃಷ್ಟಿಯಿಂದ ನಾವು ಹಿಂದೆ ಸರಿದಿದ್ದೇವೆ. ಮುಂದೆ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ತಾತ್ಕಾಲಿಕವಾಗಿ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದರು. 


ಇದನ್ನೂ ಓದಿ: ಡಿಕೆ ಶಿವಕುಮಾರ್ ರಾಜಕೀಯ ಗುರುವಿನಿಂದ ಪಾದಯಾತ್ರೆ ಕೈಬಿಡಲು ಸಲಹೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.