ಬೆಂಗಳೂರು : 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾಂಗ್ರೇಸ್ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸಂಬಂಧ ರಾಜ್ಯ ನಾಯಕರುಗಳ ಜೊತೆ ಚರ್ಚೆ ನಡೆಸಲು ಕಾಂಗ್ರೇಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಕೆ.ಸಿ.ವೇಣುಗೋಪಾಲ್ ಬಳಿಕ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಘಟಕದ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯು ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. 


ನಾಳೆ ಸಂಪುಟ ಸಚಿವರುಗಳ ಜೊತೆಗಿನ ಸಭೆಯು ಕೆ.ಸಿ.ವೇಣುಗೋಪಾಲ್ ಸಭೆ ನಡೆಸಲಿದ್ದಾರೆ. ದೇವನಹಳ್ಳಿ ರಸ್ತೆಯ ಕ್ಲಾರ್ಕ್ ರೆಸಾರ್ಟ್ ನಲ್ಲಿ ನಡೆಯಲಿದ್ದು, ಮುಂದಿನ ಚುನಾವಣೆಯ ತಂತ್ರಗಾರಿಕೆಯೇ ಸಭೆಯ ಪ್ರಮುಖ ಅಜೆಂಡಾ ಎನ್ನಲಾಗುತ್ತಿದೆ. 


ನಾಳಿನ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಪಕ್ಷದ 30 ಸಚಿವರುಗಳಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.