ಮುಂದಿ‌ನ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಮತಭೇಟೆಗೆ ಸಕಲ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಪ್ರವಾಸ ಯಶಸ್ವಿಯಾದ ಬೆನ್ನಲ್ಲೇ ಕಾಂಗ್ರೆಸ್(ಎಐಸಿಸಿ) ಅಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ 20 ರಂದು ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ವಿವಿಧ ಭಾಗಗಳಲ್ಲಿ ರ್ಯಾಲಿ, ರೋಡ್ ಶೋ, ಸಮಾವೇಶಗಳನ್ನು ನಡೆಸಲಿದ್ದಾರೆ. ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಲ್ಲ ಹಿರಿಯ ನಾಯಕರು ಸಾಥ್ ನೀಡಲಿದ್ದಾರೆ.


ರಾಹುಲ್ ಅವರ ಮಾರ್ಚ್ 20ರ ಕಾರ್ಯಕ್ರಮದ ವಿವರ ಇಂತಿದೆ


  • ಬೆಳಿಗ್ಗೆ 11.30 ಕ್ಕೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮನ.

  • ಅಲ್ಲಿಂದ ಉಡುಪಿ ಜಿಲ್ಲೆಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ರಾಹುಲ್.

  • ಉಡುಪಿಯಲ್ಲಿ ಮಧ್ಯಾಹ್ನ 12 ಕ್ಕೆ ಸೇವಾದಳ ತರಬೇತಿ ಸಂಸ್ಥೆ ಉದ್ಘಾಟನೆ.

  • ರಾಹುಲ್ ಗಾಂಧಿ ಜನಾಶೀರ್ವಾದ ಬಸ್ ಮೂಲಕ ಪಡುಬಿದ್ರೆಗೆ ತೆರಳಿ ಕಾರ್ನರ್ ಸಭೆಯಲ್ಲಿ ಭಾಗಿ.

  • ಮಂಗಳೂರು ಜಿಲ್ಲೆಯ ಮುಲ್ಕಿ , ಸುರತ್ಕಲ್ ಹಾಗೂ ಮಂಗಳೂರಿನ ಜ್ಯೋತಿ ವೃತ್ತಗಳಲ್ಲಿ ರಾಹುಲ್ ರ್ಯಾಲಿ.

  • ನಂತರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ರಾಹುಲ್ ಭಾಗಿ. 

  • ಮಂಗಳೂರಿನ ಸಮಾವೇಶದ ಬಳಿಕ ನಗರದ ಕುದ್ರೋಳಿ ಗೋಕರ್ಣೇಶ್ವರ ದೇವಸ್ಥಾನ, ಪುರಾತನ ರಜೋರಿಯಾ ಚರ್ಚ್ ಹಾಗೂ  ಉಲ್ಲಾಳ ದರ್ಗಾಗಳಿಗೆ ರಾಹುಲ್ ಭೇಟಿ.