ಬೆಂಗಳೂರು: ಗುರುವಾರದಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಡಧ್ವಜವನ್ನು ಅನಾವರಣಗೊಳಿಸಿದ ನಂತರ  ಧ್ವಜದ ವಿಚಾರವಾಗಿ  ಬಿಜೆಪಿ ತಾಳಿರುವ ಮೌನ ನಿಲುವನ್ನು ಕಾಂಗ್ರೆಸ್ ಪ್ರಶ್ನಿಸಿದೆ. 



COMMERCIAL BREAK
SCROLL TO CONTINUE READING

ಈ ಕುರಿತಾಗಿ ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷವು  ಬಿಜೆಪಿ ಸಂಸದರು ಮತ್ತು ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮೇಲೆ ಧ್ವಜಕ್ಕೆ ಒಪ್ಪಿಗೆ ನೀಡಲು ಒತ್ತಡ ಹಾಕುವ ಪ್ರಯತ್ನ ಮಾಡುತ್ತಾರೆಯೇ ಎಂದಿದೆ. ಬಿಜೆಪಿಯು ಕನ್ನಡದ ಸ್ವಾಭಿಮಾನದಲ್ಲಿ ಕಿಂಚಿತ್ತು ಆಸಕ್ತಿ ಇಲ್ಲ, ಇದೆ ಕಾರಣಕ್ಕಾಗಿ ಅದು ಮೌನ ತಾಳಿದೆ ಎಂದು ತನ್ನ ಟ್ವೀಟ್ ನಲ್ಲಿ ತಿಳಿಸಿದೆ.


ಗುರುವಾರದಂದು ಬಿಡುಗಡೆಗೊಳಿಸಿರುವ ನಾಡಧ್ವಜವನ್ನು  ಕನ್ನಡಿಗರ ಹೆಮ್ಮೆಯ ಸಂಕೇತವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದಾರೆ.ಹಳದಿ,ಬಿಳಿ,ಮತ್ತು ಕೆಂಪು  ಜೊತೆಗೆ ಗಂಡಭೇರುಂಡದ ಲಾಂಛನವನ್ನು ಒಳಗೊಂಡಿದೆ.