ವಿಜಯಪುರ : ಒಳ ಒಪ್ಪಂದ ಇರೋವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ ಎಂದು ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿಯೇ ಪಕ್ಷದ ಹಿರಿಯ ಮುಖಂಡ, ದಲಿತ  ನಾಯಕ ಚಂದ್ರಶೇಖರ ಕೊಡಬಾಗಿ ಈ ಮುಜುಗರದ ಹೇಳಿಕೆಯನ್ನ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕಾಂಗ್ರೆಸ್ ನವ ಸಂಕಲ್ಪ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಚಂದ್ರಶೇಖರ ಕೊಡಬಾಗಿ, ಎಲ್ಲಿಯವರೆಗೆ ಒಳ ಒಪ್ಪಂದ ಬಗೆ ಹರಿಯುವದಿಲ್ಲ ಅಲ್ಲಿಯವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಉದ್ದಾರ ಆಗಲ್ಲ. ನಿಮ್ಮ ವೈಯಕ್ತಿಕ ಗೆಳತನ‌ ಏನೇ ಮಾಡಿಕೊಳ್ಳಿ, ಪಕ್ಷ ಪಕ್ಷ ನಿಷ್ಟೆ ಇರಬೇಕು. ಪಕ್ಷ ನಿಷ್ಟೇ ಬಹಳ ಮುಖ್ಯ, ಕೆಲವರು ನಮಗೆ ಪಕ್ಷವೇ ಇಲ್ಲ ಎಂದು ಹೇಳುವವರೂ ಇದ್ದಾರೆ, ಅಂತವರ ಕಾರ್ಯಕರ್ತರನ್ನು ಕರೆದುಕೊಂಡು ಬೇಕಾದ್ರೆ ರಾಜಕೀಯ ಮಾಡ್ರೀ. ಒಮ್ಮೆ ಒಂದು ಪಕ್ಷದಿಂದ ಗೆದ್ದ ಮೇಲೆ ಆ ಪಕ್ಷಕ್ಕೆ ನಿಷ್ಟೆಯಿಂದ ಇರಬೇಕು ಎಂದರು. 


ಇದನ್ನೂ ಓದಿ : Karnataka Government : ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ವಾಪಸ್ ಪಡೆದ ರಾಜ್ಯ ಸರ್ಕಾರ


ಇನ್ನೂ ಮುಂದುವರೆದು ಮಾತನಾಡಿದ ಅವರು,  ನೀವೇಲ್ಲರೂ ಒಟ್ಟು ಗೂಡಿ 8 ಮತಕ್ಷೇತ್ರಕ್ಕೆ ಟಿಕೇಟ್ ಕೊಡಿ, ಕೆಪಿಸಿಸಿ, ಎಐಸಿಸಿ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ನೀವು ಮನಸ್ಸು ಮಾಡಿದರೆ 8 ಮತಕ್ಷೇತ್ರದ ಸೀಟುಗಳು ಗೆಲ್ಲಬಹುದು. ಅನ್ಯ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತೀರಿ. ನೀವು ಎಲ್ಲಿಯ ವರೆಗೆ ಅನ್ಯ‌ಪಕ್ಷದವರೊಂದಿಗೆ ಒಳ‌ ಒಪ್ಪಂದ ಮಾಡಿಕೊಳ್ಳುತ್ತೀರಿ ಅಲ್ಲಿಯವರೆಗೆ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಸಾದ್ಯವಿಲ್ಲ. ಇಂದು ಲಿಂಗಾಯತರು ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತೆ ಲಿಂಗಾಯತ ಮತದಾರರನ್ನು ಕಾಂಗ್ರೆಸ್ ತರಲು ಪ್ರಯತ್ನ ಮಾಡಬೇಕು. ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು. ಅವರನ್ನು ಗೆಲ್ಲಿಸಿ‌ ತರುವ ಕೆಲಸ ಲಿಂಗಾಯತ ನಾಯಕರು ಮಾಡಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ : Karnataka rain update : ಕರಾವಳಿಯಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ