ಬಿಜೆಪಿ ಸರ್ಕಾರದ ಕಮಿಷನ್ ‘ಪಾಪದ ಕೊಡ’ ತುಂಬಿದ್ರೂ ಬುದ್ದಿ ಬಂದಿಲ್ಲ: ಕಾಂಗ್ರೆಸ್
40% ಬಗ್ಗೆ ಕಮಿಷನ್ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ ಸಿಎಂ ಬೊಮ್ಮಾಯಿ ಈಗ ಏನು ಹೇಳುತ್ತಾರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಶಾಸಕರನ್ನು 'ಕುರಿ'ಗಳಂತೆ ಹೈಜಾಕ್ ಮಾಡಿ ರಚಿಸಿರುವ ಸರ್ಕಾರ, ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ' ಮಾಡಲು ಯತ್ನಿಸಿ #BJPBrashtotsava ಪ್ರಕರಣಗಳನ್ನು ಮುಚ್ಚು ಹಾಕಬೇಕೆಂದಿದೆ’ ಎಂದು ಕಾಂಗ್ರೆಸ್ ಕುಟುಕಿದೆ.
ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿಯ ಮರ್ಮವೇನು?: ಕಾಂಗ್ರೆಸ್
‘ಬಿಜೆಪಿ ಕಮಿಷನ್ 40% ರಿಂದ 50% ಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಯಲ್ಲಿ 50% ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು? ಕೇವಲ 'ಮರಳು' ಮಾತ್ರ. ಹಾಗಾಗಿ ಜನತೆಗೆ ಉಳಿಯುವುದು 'ಮರಳಿ'ನ ರಸ್ತೆಗಳು ಮಾತ್ರ. ಮಳೆ ಬಂದರೆ 'ಮರಳು' ಮಾಯ. ರಸ್ತೆಯೂ ಮಾಯ. ಜನರ ಪ್ರಾಣಕ್ಕೆ 50% ಕಮಿಷನ್’ ಎಂದು ಕಿಡಿಕಾರಿದೆ.
ಬಸವರಾಜ್ ಬೊಮ್ಮಾಯಿ ಈಗ ಏನು ಹೇಳುತ್ತಾರೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಸಂಸದ ಪ್ರಸಾದ್ ವ್ಯಂಗ್ಯ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.