ಭ್ರಷ್ಟಾಚಾರದಲ್ಲಿ ಬಿಜೆಪಿ ನಾಚಿಕೆಯ ಕೊನೆಯ ಗೆರೆಯನ್ನೂ ಮೀರಿದೆ: ಕಾಂಗ್ರೆಸ್
#40PercentSarkara: ಚುನಾವಣೆಗೆ ಬಂಡವಾಳ ಕ್ರೋಡೀಕರಣಕ್ಕಾಗಿ 40% ಕಮಿಷನ್ ದಂಧೆಯನ್ನು ಗ್ರಾಮಪಂಚಾಯ್ತಿಗೂ ತಲುಪಿಸಿದ ಕೀರ್ತಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ! ಎಂದು ಕಾಂಗ್ರೆಸ್ ಟೀಕಿಸಿದೆ.
ಬೆಂಗಳೂರು: ಭ್ರಷ್ಟಾಚಾರದಲ್ಲಿ ಬಿಜೆಪಿ ನಾಚಿಕೆಯ ಕೊನೆಯ ಗೆರೆಯನ್ನೂ ಮೀರಿ ನಿಂತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘PSIನಂತಹ ಸರ್ಕಾರಿ ಹುದ್ದೆಗಳಷ್ಟೇ ಅಲ್ಲ, ಮಂಡ್ಯದ MANMUL ಶಿವಮೊಗ್ಗದ DCC ಬ್ಯಾಂಕುಗಳಂತಹ ಸಹಕಾರಿ ಸಂಸ್ಥೆಗಳ ಹುದ್ದೆಗಳನ್ನೂ ಲಕ್ಷ ಲಕ್ಷ ರೂಪಾಯಿಗಳಿಗೆ ಮಾರಾಟಕ್ಕಿಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿಯವರೇ "ಹಣಕ್ಕಾಗಿ ಹುದ್ದೆ" ಯೋಜನೆಗೆ ಕೊನೆ ಹಾಡದಿರುವುದೇಕೆ?’ ಎಂದು ಪ್ರಶ್ನಿಸಿದೆ.
‘ಶಿವಮೊಗ್ಗದ DCC ಬ್ಯಾಂಕಿನ 14 ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ 40ರಿಂದ 50 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ದೂರು ನೀಡಿದರೂ ತನಿಖೆ ಇಲ್ಲವೇಕೆ ಬಸವರಾಜ ಬೊಮ್ಮಾಯಿಯವರೇ? ಅಭ್ಯರ್ಥಿಗಳಿಂದ ಅಕ್ರಮವಾಗಿ ಪ್ರಶ್ನೆ ಪತ್ರಿಕೆಯನ್ನೇ ಹಿಂಪಡೆದಿದ್ದರ ಹಿಂದಿರುವ ಉದ್ದೇಶವೇನು? ಈ ಅಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರ "ಸಹಕಾರ"ವೂ ಇದೆಯೇ?’ ಎಂದು ಪ್ರಶ್ನಿಸಿದೆ.
ಬಾಡೂಟದ ಬಳಿಕ ದೇವಸ್ಥಾನಕ್ಕೆ ತೆರಳಿದ ಸಿ ಟಿ ರವಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
‘ಹಿಂದಿನ ಪ್ರಣಾಳಿಕೆಯಲ್ಲಿ 600 ಆಶ್ವಾಸನೆಗಳನ್ನು ನೀಡಿತ್ತು ಬಿಜೆಪಿ, ಅದರಲ್ಲಿ ಕಾರ್ಯರೂಪಕ್ಕೆ ತಂದಿದ್ದು 50 ಮಾತ್ರ. ಹಳೆ ಪ್ರಣಾಳಿಕೆಯ ಆಶ್ವಾಸನೆಗಳನ್ನೇ ಈಡೇರಿಸದೆ, ಜನರ #kivimelehoova ಇಡಲು ಹೊಸ ಹೂವನ್ನು ತಂದಿದೆ ಬಿಜೆಪಿ! #PayCM QR ಕೋಡ್ ಸ್ಕ್ಯಾನ್ ಮಾಡಿ, ಭ್ರಷ್ಟ ಬಿಜೆಪಿಯ ಅಸಲಿತನದ ದರ್ಶನ ಪಡೆದುಕೊಳ್ಳಿ!’ ಎಂದು ಕಾಂಗ್ರೆಸ್ ಕುಟುಕಿದೆ.
ಕಾಂಗ್ರೆಸ್ ಟೀಕಿಸಿದೆ.
ಕಾರ್ಪೇಂಟರ್ ಅಡ್ಡಗಟ್ಟಿ ಕತ್ತು ಕೊಯ್ದು ಬರ್ಬರ ಹತ್ಯೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.