ಬೆಂಗಳೂರು: ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದರಿಂದ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 350 ರೂ. ಏರಿಕೆ ಮತ್ತು ಗೃಹಬಳಕೆಯ ಸಿಲಿಂಡರ್ ಬೆಲೆ 50 ರೂ. ಏರಿಕೆ. ಅಚ್ಛೆ ದಿನಗಳಲ್ಲಿ ಅನ್ನ ಬೇಯಿಸಿ ತಿನ್ನುವುದೂ ಕೂಡ "ಐಷಾರಾಮಿ ಜೀವನ" ಎನ್ನುವ ಸ್ಥಿತಿಗೆ ತಂದಿಟ್ಟಿದ್ದಕ್ಕೆ #ThankYouModi !! ಮೊದಲು ಹೊಗೆಯಿಂದ ಕಣ್ಣೀರು ಬರ್ತಿತ್ತು, ಈಗ ಸಿಲಿಂಡರ್ ಕೂಡ ಕಣ್ಣೀರು ತರಿಸುತ್ತಿದೆ ಅಲ್ಲವೇ ಬಿಜೆಪಿ?’ ಎಂದು ಕಾಂಗ್ರೆಸ್ ಕುಟುಕಿದೆ.


ಇಂದಿನಿಂದ ಸರ್ಕಾರಿ ನೌಕರರ ಪ್ರೊಟೆಸ್ಟ್- ಜನಸಾಮಾನ್ಯರ ಮೇಲೆ ಡೈರೆಕ್ಟ್ ಎಫೆಕ್ಟ್


‘ಪ್ರಧಾನಿ ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆ ಬರೆ ಎಳೆದು ಹೋದರು ಎಂದೇ ಅರ್ಥ! ಗೃಹಬಳಕೆಯ ಸಿಲಿಂಡರ್ ದರ ಇಂದಿನಿಂದ ಮತ್ತೆ 50 ರೂ. ಏರಿಕೆಯಾಗಿದೆ. ಮೋದಿಜಿಯ ಅಚ್ಛೆ ದಿನಗಳಲ್ಲಿ ಜನರು ಕಾಡುಮೇಡು ಅಲೆದು ಗೆಡ್ಡೆಗೆಣಸು ತಿಂದು ಬದುಕುವ ಹಂತಕ್ಕೆ ಬರುವುದು ನಿಶ್ಚಿತ. ಈ ಅಮಾನವೀಯ ಬೆಲೆ ಏರಿಕೆಯಲ್ಲಿ ನೆರವು ನೀಡಲೆಂದೇ ನಮ್ಮ #GruhaLakshmi ಯೋಜನೆಯಯಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.


ಇಂದಿನಿಂದ ಬಿಜೆಪಿ ರಥಯಾತ್ರೆ- ಮಲೆ ಮಹದೇಶ್ವರ ಬೆಟ್ಟದಿಂದ ಜೆಪಿ ನಡ್ಡಾ ಚಾಲನೆ


ಇಂದು ಬಿ.ಎಸ್.ಯಡಿಯೂರಪ್ಪನವರ ಕಾಲು ಹಿಡಿಯುತ್ತಿರುವ ಬಿಜೆಪಿ  ಕಣ್ಣೀರು ಹಾಕಿಸಿ ಅವರಿಂದ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ. ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದ BSY ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ? ಮತ್ತು ಕಣ್ಣೀರು ಹಾಕಿ ಗೋಳಾಡಿದ್ದೇಕೆ? ಇವು ಇಂದಿಗೂ ಸಿಗದ ಉತ್ತರದ ಪ್ರಶ್ನೆಗಳು’ ಎಂದು ಟ್ವೀಟ್ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.