ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಮೇಲೆ ಐಟಿ, ಇ.ಡಿ, ಸಿಬಿಐಗಳು ದಾಳಿ ಮಾಡಲು, ವಿಚಾರಣೆ ಮಾಡಲು ಭಯಪಡುತ್ತವೆಯೇ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೆಸರಲ್ಲಿ ನೂರಾರು ಕೋಟಿ ರೂ. ಅಕ್ರಮ ಮೇಲ್ನೋಟಕ್ಕೆ ಕಂಡುಬಂದರೂ ತನಿಖೆ ನಡೆಸದಿರುವುದೇಕೆ? ಇ.ಡಿ ನಿಷ್ಪಕ್ಷಪಾತವಾಗಿ ಇರುವುದು ನಿಜವೇ ಆಗಿದ್ದರೆ ಕೂಡಲೇ ಬಂಧಿಸಿ, ತನಿಖೆ ನಡೆಸಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.


16 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ


‘ಕನ್ನಡ ನಾಡು-ನುಡಿಯ ಬಗ್ಗೆ ಕಿಂಚಿತ್ತೂ ಗೌರವಿಲ್ಲದ ಬಿಜೆಪಿ ತನ್ನ ಗುಲಾಮಗಿರಿಯ ಮನಸ್ಥಿತಿಯನ್ನು ಮತ್ತೊಮ್ಮೆ ತೆರೆದಿಟ್ಟಿದೆ’ ಎಂದು ಹಿಂದಿ ಭಾಷೆ ಬಳಕೆ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.


ಕರ್ನಾಟಕದ ಬಿಜೆಪಿ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಿಂದಿ ರಾರಾಜಿಸುತ್ತಿದೆ. ಇದು ನಾಗಪುರದ ಅದೇಶವೇ, ಅಥವಾ ಹೈಕಮಾಂಡ್ ಅದೇಶವೇ ಬಿಜೆಪಿ? ಈ ಪರಿಯ ಗುಲಾಮಗಿರಿ ಒಳ್ಳೆಯದಲ್ಲ! ಸ್ವಲ್ಪವಾದರೂ ಸ್ವಾಭಿಮಾನವಿರಲಿ!’ ಎಂದು ಕುಟುಕಿದೆ.


ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ: ಅನಾವಶ್ಯಕವಾಗಿ ವಾಹನ ತಡೆಯದಂತೆ ಡಿಜಿ & ಐಜಿಪಿ ಸೂಚನೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ