ಬೆಂಗಳೂರು: ನೋಟ್ ಬ್ಯಾನ್‌ ಎಂಬ ರಾಷ್ಟ್ರೀಯ ದುರಂತ ಸಂಭವಿಸಿ ಇಂದಿಗೆ 6 ವರ್ಷ. ಸಂಭ್ರಮಾಚರಣೆ ನಡೆಸುವುದಿಲ್ಲವೇ ಬಿಜೆಪಿ? ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೂರಾರು ಜನರ ಜೀವ ಬಲಿ, ಅರ್ಥ ವ್ಯವಸ್ಥೆ ಬುಡಮೇಲು, ಸಿಗದ ಕಪ್ಪು ಹಣ, ನಿಲ್ಲದ ಭ್ರಷ್ಟಾಚಾರ, ಉದ್ದಿಮೆಗಳಿಗೆ ಬೀಗ ಮತ್ತು ಆಗದ ಕ್ಯಾಶ್‌ಲೆಸ್ ಎಕಾನಮಿ. ದೇಶ ಅಪ್ರಬುದ್ಧರ ಕೈಗೆ ಸಿಕ್ಕು ನಲುಗುತ್ತಿರುವುದಕ್ಕೆ ಸಾಕ್ಷಿ ಇದು’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

ನೋಟ್ ಬ್ಯಾನ್ ಕಪ್ಪು ಹಣವನ್ನು ಮಟ್ಟ ಹಾಕಲು ಕೈಗೊಂಡ ದಿಟ್ಟ ನಿರ್ಧಾರ ಎಂದಿತ್ತು ಬಿಜೆಪಿ. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಏರಿಕೆಯಾಗಿದೆ, ಕಳೆದ 13 ವರ್ಷದಲ್ಲೇ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಹೋಗಿದೆ ಎಂಬ ವರದಿಗೆ ಬಿಜೆಪಿ ಬಾಯಿ ಬಿಡದಿರುವುದೇಕೆ? ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್‌ನಿಂದಾದ ಲಾಭವೇನು?’ ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.


ಮುಂದಿನ ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ: ಸಿದ್ದರಾಮಯ್ಯ


‘ನೋಟ್ ಬ್ಯಾನ್ ಮೂಲಕ ‘ಕ್ಯಾಶ್ ಲೆಸ್ ಎಕಾನಮಿ’ ಮಾಡಿಬಿಡುತ್ತೇವೆ ಎಂದಿದ್ದ ಬಿಜೆಪಿ ಈಗ ಜನರಲ್ಲಿ ನಗದು ಬಳಕೆ ಹೆಚ್ಚಳವಾಗಿದ್ದಕ್ಕೆ ಮಾತಾಡುತ್ತಿಲ್ಲವೇಕೆ? ನೋಟ್ ಬ್ಯಾನ್ ಮೊದಲಿಗಿಂತ ಈಗ ಶೇ.71ರಷ್ಟು ನಗದು ಬಳಕೆ ಹೆಚ್ಚಿರುವುದೇಕೆ? ನೋಟ್ ಬ್ಯಾನ್ ಉದ್ದೇಶದ ಬಗ್ಗೆ, ವೈಫಲ್ಯ ಬಗ್ಗೆ ಬಿಜೆಪಿ ಮಾತಾಡಲು ಹಿಂಜರಿಯುತ್ತಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಜೆಡಿಎಸ್ ಪಕ್ಷದಿಂದ ವಲಸೆ ಬಂದ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿನ ಅಸಲಿ ಕಥೆ ತಿಳಿದಿದೆಯೇ?: ಬಿಜೆಪಿ


ನೋಟ್ ಬ್ಯಾನ್ ಬಗ್ಗೆ ದೇಶದ ಜನರಿಗೆ ಉತ್ತರಿಸಲು ಹಿಂಜರಿಕೆ ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.