ಕರ್ನಾಟಕ ಉಪಚುನಾವಣೆ: ಮಂಡ್ಯಕ್ಕೆ ಬಂದು ವೋಟ್ ಹಾಕ್ತಾರಾ ರಮ್ಯಾ?
AICC ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯ ಮಂಡ್ಯದ ವಿದ್ಯಾನಗರ ಬೂತ್ ಸಂಖ್ಯೆ 17ರ ಮತದಾರರು.
ಬೆಂಗಳೂರು: ಮಂಡ್ಯ ಲೋಕಸಭಾ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ಬಾರಿಯೂ ಮಾಜಿ ಸಂಸದೆ ರಮ್ಯಾ ಮತದಾನ ಮಾಡೋದು ಅನುಮಾನ ಎನ್ನಲಾಗಿದೆ.
AICC ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯ ಮಂಡ್ಯದ ವಿದ್ಯಾನಗರ ಬೂತ್ ಸಂಖ್ಯೆ 17ರ ಮತದಾರರು. ಕೆಲ ತಿಂಗಳ ಹಿಂದೆ ನಡೆದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಾಗಲೀ, ಮತದಾನದಲ್ಲಾಗಲೀ ಪಾಲ್ಗೊಳ್ಳದ ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಈ ಬಾರಿಯೂ ಮತ ಚಲಾಯಿಸಲು ಬರುವುದು ಪ್ರಶ್ನೆಯಾಗಿಯೇ ಉಳಿದಿದೆ.
ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ಮಂಡ್ಯ ಕ್ಷೇತ್ರದಿಂದ ನಟ, ಮಾಜಿ ಸಂಸದ ಅಂಬರೀಶ್ ಅವರಿಕೆ ಟಿಕೇಟ್ ನೀಡಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಂಬರೀಷ್ ಮತ್ತು ವಲಸಿಗರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಹೀಗಾಗಿ ರಮ್ಯಾ ಮಂಡ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದು, ಅಭ್ಯರ್ಥಿಗಳ ಪರ ಪ್ರಚಾರದಿಂದಲೂ ದೂರ ಉಳಿದಿದ್ದರು. ಈ ಬಾರಿಯೂ ಅದೇ ಅಂತರ ಕಾಯ್ದುಕೊಲ್ಲಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.