ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ: ಡಿಕೆಶಿ ವಿಶ್ವಾಸ
ಕಳೆದ ಬಾರಿ ಅಧಿಕಾರದ ಹಂತಕ್ಕೆ ಬಂದಿದ್ರೂ ಕೂಡ ಸರ್ಕಾರ ರಚಿಸುವಲ್ಲಿ ‘ಕೈ’ ಪಕ್ಷ ಎಡವಿತ್ತು. ಆದರೆ ಈ ಬಾರಿ ಆ ತಪ್ಪು ಆಗದಂತೆ ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ನಡೆಸುತ್ತಿದೆ.
ಬೆಂಗಳೂರು: ಗೋವಾದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಲ್ಲಾ ಕಾಂಗ್ರೆಸ್ ಶಾಸಕರು ತಮ್ಮ ನಂಬಿಕೆ ವಿಶ್ವಾಸದಿಂದ ಒಟ್ಟಾಗಿದ್ದಾರೆಂದು ಹೇಳಿದ್ದಾರೆ.
ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ(Goa Election 2022) ರಚನೆ ಮಾಡಲಿದೆ. ಕಳೆದ ಬಾರಿಯಂತೆ ಈ ಬಾರಿ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಎಸಗುವುದಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗೋವಾಕ್ಕೆ ಬರಲಿದ್ದಾರೆ. ಅವರ ಸಹಾಯಕ್ಕಾಗಿ ನಾನು ಸಹ ಗೋವಾಕ್ಕೆ ಬಂದಿದ್ದೇನೆ. ನಾಳಿನ(ಮಾರ್ಚ್ 10) ಫಲಿತಾಂಶವು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಲಿದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೃತ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ಮೃತದೇಹ ತರಿಸಲು ಪ್ರಧಾನಿ ಮೋದಿಗೆ ಪತ್ರ
ಸರ್ಕಾರ ರಚಿಸಲು ‘ಕೈ-ಕಮಲ’ ಪಕ್ಷಗಳ ಕಸರತ್ತು!
ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ(5 State Election Result) ನಾಳೆ ಅಂದರೆ ಮಾರ್ಚ್ 10ರಂದು ಹೊರಬೀಳಲಿದೆ. ಉತ್ತರಪ್ರದೇಶದ ಸೇರಿದಂತೆ ಐದು ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಅಧಿಕಾರದ ಗದ್ದುಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಎಕ್ಸಿಟ್ ಪೋಲ್ ಫಲಿತಾಂಶ(Exit Poll Results 2022)ವನ್ನು ಆಧರಿಸಿ ಗೋವಾ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ(BJP Govt.) ರಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಹತ್ತಿರ ಬರಬಹುದು ಎನ್ನುವ ಸಮೀಕ್ಷೆಯ ನಂತರ ಕಾಂಗ್ರೆಸ್ ಮುಖಂಡರು ಚುರುಕುಗೊಂಡಿದ್ದಾರೆ. ಡಿಕೆಶಿಯನ್ನು ಗೋವಾಕ್ಕೆ ಕಳುಹಿಸಿದರೆ, ಎಂ.ಬಿ.ಪಾಟೀಲ್ ಅವರನ್ನು ಉತ್ತರಾಖಂಡಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಯಾರೋ ಮಾಡಿದ್ದಕ್ಕೆ ನೀವು ಸರ್ಟಿಫಿಕೇಟ್ ತಗೋತೀರಾ: ಕಾಂಗ್ರೆಸ್ಗೆ ಎಚ್‌ಡಿಕೆ ಪ್ರಶ್ನೆ
ಕಳೆದ ಬಾರಿ ಅಧಿಕಾರದ ಹಂತಕ್ಕೆ ಬಂದಿದ್ರೂ ಕೂಡ ಸರ್ಕಾರ ರಚಿಸುವಲ್ಲಿ ‘ಕೈ’ ಪಕ್ಷ ಎಡವಿತ್ತು. ಆದರೆ ಈ ಬಾರಿ ಆ ತಪ್ಪು ಆಗದಂತೆ ಎಚ್ಚೆತ್ತು ಕೊಂಡಿರುವ ಕಾಂಗ್ರೆಸ್ ರೆಸಾರ್ಟ್ ರಾಜಕೀಯ ನಡೆಸುತ್ತಿದೆ. ಅಂತಿಮವಾಗಿ ಮತದಾರ ಯಾವ ಪಕ್ಷಕ್ಕೆ ವಿಜಯಮಾಲೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.