ಹಿರಿಯೂರು: 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದು, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮ ಹಾಗೂ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್‌ ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ತಾಲೂಕಿನ 33 ಗ್ರಾಪಂಗಳು ಹಾಗೂ ನಗರದ 31 ವಾರ್ಡ್‌ಗಳ ಬೂತ್‌ ಸಮಿತಿ ರಚನೆ ಮತ್ತು ಕಾರ್ಯಕರ್ತರೊಡನೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಡಿ.ಸುಧಾಕರ್(D Sudhakar), ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಪಕ್ಷಗಳ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದು, ಮತ ಹಾಕಿ ಅಧಿಕಾರಕ್ಕೆ ತಂದ ಜನ ಈಗ ತಾವು ಪಶ್ಚಾತ್ಥಾಪ ಪಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ದುರಾಡಳಿತದ ವಿರುದ್ಧ ಜನಾದೇಶ ಹೊರಹೊಮ್ಮಲಿದೆ ಎಂದು ಹೇಳಿದರು.


Laxman Savadi: ಸಾರಿಗೆ ನೌಕರರಿಗೆ 'ಸಿಹಿ ಸುದ್ದಿ' ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ


ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಂಪುಟ ರಚನೆಯ ಕಸರತ್ತು, ಮುಖ್ಯಮಂತ್ರಿ ಬದಲಾವಣೆ ಸಮಸ್ಯೆಗಳಲ್ಲೇ ಸರ್ಕಾರ ಮುಳುಗಿ ಹೋಗಿದೆ. ಹೀಗಾಗಿ, ಜನರ ಸಮಸ್ಯೆಗೆ ಸ್ಪಂದಿಸುವ ತೃಣ ಮಾತ್ರದ ಕೆಲಸಗಳು ನಡೆಯುತ್ತಿಲ್ಲ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಸಂಪೂರ್ಣ ಮುಗ್ಗರಿಸಿದೆ. ಅಲ್ಲದೆ, ಕೊರೋನಾ ಸೋಂಕನ್ನು ನೆಪ ಮಾಡಿಕೊಂಡು ಸಾವಿರಾರು ಕೋಟಿ ಹಣ ಲೂಟಿ ಹೊಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ. ಅದಕ್ಕಾಗಿ ತಕ್ಕ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳೇಬೇಕಿದೆ ಎಂದರು.


Bus Strike: ಮತ್ತೆ ಬಂದಾಗಲಿದೆ ಬಸ್ ಸಂಚಾರ: ಮುಷ್ಕರಕ್ಕೆ ಮುಂದಾದ ಸಾರಿಗೆ ಸಿಬ್ಬಂದಿ!


2023ರಲ್ಲಿ ಹಿರಿಯೂರಲ್ಲೆ ಸ್ಪರ್ಧೆ, ಗೆಲುವು ಖಚಿತ: ರಾಜಕೀಯ ಮರುಜನ್ಮ ನೀಡಿ ನನಗೆ ಮಂತ್ರಿಯಾಗುವ ಭಾಗ್ಯವನ್ನು ಕರುಣಿಸಿದ ಹಿರಿಯೂರಿನ ಜನರನ್ನು ಬಿಟ್ಟು ನಾನು ಎಲ್ಲೂ ಹೋಗಲಾರೆ. ನಾನು ಕ್ಷೇತ್ರ ತೊರೆಯುವುದಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಅದಕ್ಕೆ ತಾಲೂಕಿನ ಜನ ಹಾಗೂ ಕಾರ್ಯಕರ್ತರು ಕಿವಿಗೊಡಬೇಡಿ. 2023ರಲ್ಲಿ ಹಿರಿಯೂರಿನಿಂದಲೇ ಸ್ಪರ್ಧೆ ಮಾಡಲಿದ್ದು, ಜನರು 2008ರಿಂದ 2018ರವರೆಗೆ ನಾನು ಮಾಡಿದ ಸಾವಿರಾರು ಕೋಟಿ ಅಭಿವೃದ್ಧಿ ಕೆಲಸಗಳ ಬಗ್ಗೆಯೇ ಮಾತನಾಡುತ್ತಿದ್ದು, ಈ ಸಲ ಮತ್ತೆ ನನ್ನನ್ನು ಕೈ ಹಿಡಿಯುವ ತುಂಬು ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


D.K Shivakumar: 'ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಸರ್ಕಾರ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.