ಸ್ಕೇಟಿಂಗ್ ಮೂಲಕ ಪುಠಾಣಿ ಮಕ್ಕಳಿಂದ ಸಂವಿಧಾನ ಜಾಗೃತಿ
ಕಳೆದ ಜನವರಿ 26 ರಿಂದ ಎಲ್ಲರ ಗಮನ ಸೆಳೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಭಾನುವಾರ ಪುಠಾಣಿ ಮಕ್ಕಳಿಂದ ಸ್ಕೇಟಿಂಗ್ ರ್ಯಾಲಿಯ ಮೂಲಕ ನಡೆದ ಜಾಗೃತಿ ವಿಶೇಷವಾಗಿ ಜನರ ಗಮನ ಸೆಳೆಯಿತು.
ಧಾರವಾಡ : ಕಳೆದ ಜನವರಿ 26 ರಿಂದ ಎಲ್ಲರ ಗಮನ ಸೆಳೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ಭಾನುವಾರ ಪುಠಾಣಿ ಮಕ್ಕಳಿಂದ ಸ್ಕೇಟಿಂಗ್ ರ್ಯಾಲಿಯ ಮೂಲಕ ನಡೆದ ಜಾಗೃತಿ ವಿಶೇಷವಾಗಿ ಜನರ ಗಮನ ಸೆಳೆಯಿತು.
ತರಬೇತುದಾರ ಶಶಿಧರ ಪಾಟೀಲ ಅವರ ನೇತೃತ್ವದಲ್ಲಿ ಧಾರವಾಡದ ರೋಲರ್ ಸ್ಕೇಟಿಂಗ್ ಅಕಾಡೆಮಿಯ 25ಕ್ಕೂ ಹೆಚ್ಚು 4 ರಿಂದ 12 ವರ್ಷದ ಸ್ಕೇಟರ್ಸ್‌ಗಳು ಇಲ್ಲಿಯ ಕರ್ನಾಟಕ ಕಾಲೇಜು ವೃತ್ತದಿಂದ ಜ್ಯುಬಿಲಿ ವೃತ್ತದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ವರೆಗೂ ಕೈಯಲ್ಲಿ ಸಂವಿಧಾನ ಜಾಗೃತಿ ಫಲಕಗಳನ್ನು ಹಿಡಿದು ಸ್ಕೇಟ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಡಾ.ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಎದುರು ಮಕ್ಕಳು ಸಂವಿಧಾನ ಪೀಠಿಕೆ ಓದಿದರು.
ಇದನ್ನೂ ಓದಿ: ಹುಬ್ಬಳ್ಳಿ ಮತ್ತು ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಣೆ
ಕರ್ನಾಟಕ ಕಾಲೇಜು ವೃತ್ತದಲ್ಲಿ ಸ್ಕೇಟಿಂಗ್ ರ್ಯಾಲಿಗೆ ಚಾಲನೆ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. ಮಾತನಾಡಿ, ಭಾರತದ ಸಂವಿಧಾನ ರಚನೆಯಾಗಿ 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಸಂವಿಧಾನದ ಜಾಗೃತಿ ಮಾಡಲಾಗುತ್ತಿದೆ. ಈಗಾಗಲೇ ಧಾರವಾಡದಲ್ಲಿ ಹತ್ತಾರು ರೀತಿಯಲ್ಲಿ ಜಾಥಾಗಳು ನಡೆದರೂ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸ್ಕೇಟಿಂಗ್ ಮೂಲಕ ಮಕ್ಕಳು ಜಾಗೃತಿ ಮೂಡಿಸಿದ್ದು ವಿಶೇಷ. ಶನಿವಾರವಷ್ಟೇ ಧಾರವಾಡದಲ್ಲಿ ನಡೆದ 10 ಸಾವಿರಕ್ಕೂ ಹೆಚ್ಚು ಮಕ್ಕಳ ಜಾಗೃತಿ ಜಾಥಾ ರಾಜ್ಯದಲ್ಲಿಯೇ ದಾಖಲೆ ನಿರ್ಮಿಸಿದೆ.
ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಸೇರಿದಂತೆ ಸಮಾಜದ ಎಲ್ಲರೂ ಜಾಥಾದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಸಂವಿಧಾನವನ್ನು ಅರಿಯುವ ಕಾರ್ಯ ಮಾಡಲಾಗುತ್ತಿದೆ ಎಂದರು. ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದರೆ ಸೇರಿದಂತೆ ಸ್ಕೇಟರ್ಸ್‌ಗಳ 20ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.