ಚಿಕ್ಕಮಗಳೂರು:  ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ ನಮ್ಮದು. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


COMMERCIAL BREAK
SCROLL TO CONTINUE READING

ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.ನಾರಾಯಣ ಗುರು ಅವರ ಹೆಸರಿನಲ್ಲಿವಸತಿ ಶಾಲೆ, ಎಸ್ ಸಿ ಎಸ್ ಟಿ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ,50 ಕನಕದಾಸ ಹಾಸ್ಟೆಲ್ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದರು.


ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ನಾಡು ಶೃಂಗೇರಿ. ನಾನು ದೇವರ ನಾಡಿಗೆ ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು ಜನಸಂಕಲ್ಪ ಯಾತ್ರೆಗೆ ಜನ ಬೆಂಬಲ ಸಿಗುತ್ತಿದೆ. ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸ್ತಿದೆ. ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲದಿಂದ ವಿಜಯ ಸಂಕಲ್ಪ ಯಾತ್ರೆಯಾಗಿ ಯಶಸ್ವಿಯಾಗಿದೆ ಎಂದರು.


ಇದನ್ನೂ ಓದಿ: ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ - ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಅಜಯ್ ರಾವ್


ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ 6000 ರಾಷ್ಟ್ರೀಯ ಹೆದ್ದಾರಿ  ರಸ್ತೆ, ಬಂದರುಗಳ ನಿರ್ಮಾಣ, ಜಲಜೀವನ ಮಿಷನ್ ಯೋಜನೆಗಳು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿಯಾದ ಕುಡಿಯುವ ನೀರಿನ ಯೋಜನೆಯನ್ನು ಕೇವಲ ಒಂದೇ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಪೂರೈಸಲಾಗಿದೆ. ಕೋವಿಡ್ ನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸಲಾಯಿತು. ಔಷಧಿ, ಆರೋಗ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ನೀಡಲಾಯಿತು. ಪ್ರವಾಹದಲ್ಲಿಯೂ  5 ಲಕ್ಷ ಪರಿಹಾರಗಳನ್ನು ನೀಡಲಾಯಿತು. ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಿ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ 5 ಹೆಚ್ ಪಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರೈತಮಕ್ಕಳಿಗೆ ವಿದ್ಯಾನಿಧಿ, 6 ಲಕ್ಷ ರೈತ ಕೂಲಿಕಾರ್ಮಿಕರಿಗೆ ವಿದ್ಯಾನಿಧಿ  ನೀಡುತ್ತಿದೆ.


5 ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ,ಪ್ರತಿ ಗ್ರಾಮದಲ್ಲಿ ಎರಡು ವಿವೇಕಾನಂದ ಯುವಕ ಸಂಘ ಕ್ಕೆ ಆರ್ಥಿಕ ಸಹಾಯ ನೀಡಿ, ಅವರ ಸ್ವಯಂಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಕಂಬಾರ,ಕುಂಬಾರ, ಬಡಿಗೇರ, ಟೇಲರ್ ಗಳಿಗೆ ಅವರ ವೃತ್ತಿ ಕಾಯದ ಆಧಾರದ ಮೇಲೆ ಕಾಯಕ ಯೋಜನೆಯ ಮೂಲಕ ಸಾಲ ನೀಡಲಾಗುತ್ತದೆ ಎಂದರು.


ಇದನ್ನೂ ಓದಿ: ಸಪ್ತಮಿಗೌಡ ಹೊಸ ಸಿನಮಾ ಅನೌನ್ಸ್‌ : ʼಕಾಳಿʼಯಲ್ಲಿ ಲೀಲಾ ನಟನೆ.. ಹೀರೋ ಯಾರು..!


ಸರ್ಕಾರ ಹಾಗು ಜನರು ಶ್ರೀಮಂತ ರಾಗಬೇಕು. ಜನರ ಬಳಿ ಹಣ ಇದ್ದರೆ ಮಾತ್ರ ಸರ್ಕಾರ ಶ್ರೀಮಂತ ಆಗುತ್ತದೆ.  ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲವಿದು.ಜನರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಸರ್ಕಾರದ ಸಂಕಲ್ಪ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.