ಚಾಮರಾಜನಗರ: ತಮಿಳುನಾಡು ಹಾಗೂ ಕರ್ನಾಟಕದ ಎಂಎಲ್ಎಗಳು ಗಡಿಯಲ್ಲಿ ರೌಂಡ್ಸ್ ಹಾಕಿ  ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ತಮಿಳುನಾಡಿನ ಹಂದಿಯೂರು ಶಾಸಕ ಎ‌.ಜೆ.ವೆಂಕಟಾಚಲಂ ನಾಲ್ ರೋಡ್‌ನಲ್ಲಿ ಎರಡೂ ರಾಜ್ಯದ ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ರಸ್ತೆ ನಿರ್ಮಾಣ ಸಂಬಂಧ ಎರಡು ರಾಜ್ಯದಿಂದ ಜಂಟಿ ಸರ್ವೇ ನಡೆಸಲು ನಿರ್ಣಯ ತೆಗೆದುಕೊಂಡಿದ್ದಾರೆ.


ಏನಿದು ರಸ್ತೆ ಕಥೆ-ವ್ಯಥೆ: 
ಹನೂರು ತಾಲೂಕು ತಮಿಳುನಾಡಿನ ಗಡಿಯನ್ನು ಹಂಚಿಕೊಂಡಿದ್ದು ಕರ್ನಾಟಕಕ್ಕಿಂತ ತಮಿಳುನಾಡಿನ ಪ್ರದೇಶಗಳ ಜೊತೆ ಇವರ ವ್ಯಾಪಾರ-ಆರೋಗ್ಯ ಸಂಬಂಧಗಳಿವೆ. ಹನೂರಿನ ಹೂಗ್ಯಂ ಪಂಚಾಯ್ತಿಗೆ ಒಳಪಡುವ ಜಲ್ಪಿಪಾಳ್ಯಂ ಗ್ರಾಮದ ನಡುವೆ ಹಳ್ಳ ಹಾದುಹೋಗಿದ್ದು ಆಳೆತ್ತರದ ನೀರಲ್ಲಿ ಜನರು ಹಗ್ಗ ಹಿಡಿದೇ ಸಾಗಬೇಕಿದೆ.


ಇದನ್ನೂ ಓದಿ- ದೇಶದ ಪ್ರಧಾನಿಯಾದವರು ಕರ್ನಾಟಕ ಸರ್ಕಾರದ ಬಗ್ಗೆ ಸುಳ್ಳುಆರೋಪ ಮಾಡಬಹುದೇ?- ಸಿಎಂ ಸಿದ್ದರಾಮಯ್ಯ ಪ್ರಶ್ನೆ 


ತಮಿಳುನಾಡಿಗೆ ಸೇರಿದ ಗುಡ್ಡೆಯೂರು, ಮಡಿತರೈ ಮಾಕನಪಾಳ್ಯ ಸೇರಿದಂತೆ ಏಳು ಗ್ರಾಮಗಳು ರಾಜ್ಯದ ಜಲ್ಲಿಪಾಳ್ಯ, ಹೂಗ್ಯಂ ಮತ್ತು ತಮಿಳುನಾಡಿನ ಮುಖ್ಯರಸ್ತೆಗೆ ಹತ್ತಿರವಾಗಿದ್ದರೂ ಸಮಪ೯ಕ ರಸ್ತೆಯಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 3 ಕಿಮೀ ರಸ್ತೆಗೆ ಅನುಮತಿ ನೀಡಿದರೇ ತಮಿಳುನಾಡಿಗೆ 2.5 ಕಿ.ಮೀ. ಹತ್ತಿರದ ಮುಖ್ಯರಸ್ತೆ ತಲುಪಬಹುದು. ಹಾಗೆಯೆ  ಹನೂರು ಕ್ಷೇತ್ರದ ಹೂಗ್ಯಂ ಪಂಚಾಯ್ತಿಗೆ ಹತ್ತಿರ ಆಗಲಿದೆ, ಆಸ್ಪತ್ರೆಗಳಿಗೆ, ಮೂಲಸೌಕರ್ಯ ಕಲ್ಪಿಸಲು ಅನೂಕಲವಾಗಲಿದೆ ಎಂದು ಅರಣ್ಯ ಇಲಾಖೆಗೆ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ.


ಇದನ್ನೂ ಓದಿ- ಪಾರ್ಕಿಂಗ್ ಏರಿಯಾಗಳಲ್ಲಿ ನಿಂತ ನೀರು-ಮಳೆ ಅವಾಂತರ


ಎರಡು ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಲು ಒಪ್ಪಿದ್ದು  ರಸ್ತೆ ನಿರ್ಮಾಣದ ಕನಸು ಮತ್ತೇ ಜನರಲ್ಲಿ ಚಿಗುರಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.