ಮದ್ಯರಂಗಕ್ಕೆ ಭಕ್ತಸಾಗರ- ಕಾಡು ನಾರಾಯಣನಿಗೆ ಸಪ್ತ ದ್ವಾರ ನಿರ್ಮಾಣ
Vaikunth Ekadashi: ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ರಂಗನಾಥಸ್ವಾಮಿಯನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಚಾಮರಾಜನಗರ: ವೈಕುಂಠ ಏಕಾದಶಿ ಹಿನ್ನೆಲೆ ಜಿಲ್ಲೆಯ ಹರಿಯ ದೇಗುಲಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನೆರವೇರುತ್ತಿದ್ದು ಚಳಿಯನ್ನು ಲೆಕ್ಕಿಸದೇ ಭಕ್ತಸಾಗರವೇ ದೇಗುಲಕ್ಕೆ ಹರಿದು ಬರುತ್ತಿದೆ.
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ರಂಗನಾಥಸ್ವಾಮಿಯನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ರಾಜಕೀಯ ಗಣ್ಯರು, ಅಧಿಕಾರಿಗಳು ಮಧ್ಯರಂಗನಾಥನಿಗೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ, ಅರ್ಚನೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು.
ಸಪ್ತದ್ವಾರ ನಿರ್ಮಾಣ:
ವೈಕುಂಠ ಏಕಾದಶಿ ಪ್ರಯುಕ್ತ ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಶ್ರೀದೇವಿ ಸಮೇತ ಕಾಡು ನಾರಾಯಣಸ್ವಾಮಿ ದೇಗುಲದಲ್ಲಿ ಸಪ್ತದ್ವಾರ ನಿರ್ಮಾಣ ಮಾಡಲಾಗಿದೆ. ಸಪ್ತದ್ವಾರದ ಮೂಲಕ ನಾರಯಣನ ದರ್ಶನ ಮಾಡಿದರೇ ಮೋಕ್ಷ ಸಿಗಲಿದೆ ಎಂಬ ನಂಬಿಕೆ ಹಿನ್ನೆಲೆ ಸಹಸ್ರಾರು ಮಂದಿ ಭಕ್ತರು ಸಪ್ತದ್ವಾರಗಳಿಗೆ ಮೂಲಕ ನಾರಾಯಣನಿಗೆ ನಮಿಸಿದರು.
ಇದನ್ನೂ ಓದಿ: ರಾಜ್ಯಾದ ಜನರೇ ಎಚ್ಚರ !ಜನವರಿ 15ರ ವರೆಗೂ ರಾಜ್ಯಾದ್ಯಂತ ಇರಲಿದೆ ಕೊರೆಯುವ ಚಳಿ
ದೇಗುಲ ಅರ್ಚಕರಾದ ರಾಮಚಂದ್ರ, ವಿಪ್ರ ಮುಖಂಡರಾದ ಸತೀಶ್ ರುದ್ರಭೂಮಿ, ಶ್ರೀಧರ್ ಸೇರಿದಂತೆ ಆಗಮಿಕರು ಮುಂಜಾನೆ 2.30 ರಲ್ಲಿ ವಿಶೇಷ ಪಂಚಾಮೃತ ಅಭಿಷೇಕ, ಬೆಳಗ್ಗೆ 6 ಕ್ಕೆ ದೇವಾಸ್ಥಾನ ಸಭಾಂಗಣದಲ್ಲಿ ಉತ್ಸವ ನೆರವೇರಿಸಿದರು. ಭಕ್ತರು ವಿವಿಧ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಶ್ರೀದೇವಿ ಸಮೇತ ನಾರಾಯಣನ ದೇವರ ದರ್ಶನ ಪಡೆದರು. ಅರ್ಚನೆ, ವಿಶೇಷ ಪೂಜೆಗಳನ್ನು ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು. ಸಹಸ್ರಾರು ಭಕ್ತರಿಗೆ ಪ್ರಸಾದ ಹಾಗೂ ವಿಶೇಷ ಲಾಡುಗಳನ್ನು ವಿತರಣೆ ಮಾಡಲಾಗುತ್ತಿತ್ತು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇಗುಲ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೂ ವೈಕುಂಠ ಏಕಾದಶಿ ಹಿನ್ನೆಲೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಇಷ್ಟಾರ್ಥ ಪ್ರಾರ್ಥನೆ ಮಾಡಿದರು.
ಇದನ್ನೂ ಓದಿ: ರಾಜಕೀಯ ಕಾರಣಗಳಿಂದ ಮೇಕೆದಾಟುವಿಗೆ ಅನುಮತಿ ವಿಳಂಬ: ಡಿಸಿಎಂ ಡಿ. ಕೆ. ಶಿವಕುಮಾರ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.